ಕೆರೆಗೆ ಬಿದ್ದು ಮೃತ್ಯು
Update: 2018-07-23 22:59 IST
ಬ್ರಹ್ಮಾವರ, ಜು.23: ಆಕಸ್ಮಿಕವಾಗಿ ಕಾಲು ಜಾರಿ ಕೆರೆಯ ನೀರಿಗೆ ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಜು. 23ರಂದು ಬೆಳಗ್ಗೆ ಉಪ್ಪೂರು ಗ್ರಾಮದ ಅಬ್ಬಣಕುದ್ರು ಎಂಬಲ್ಲಿ ನಡೆದಿದೆ.
ಮೃತರನ್ನು ಅಶೋಕ್ ಪೂಜಾರಿ (43) ಎಂದು ಗುರುತಿಸಲಾಗಿದೆ. ತನ್ನ ಮಾವನ ಮನೆಗೆ ಬಂದಿದ್ದ ಇವರು ಅಲ್ಲೇ ಸಮೀಪದ ಅತ್ತಳಕೆರೆ ಎಂಬಲ್ಲಿ ಕೆಸುವಿನ ಎಲೆ ಕೊಯ್ಯಲು ಹೋದವರು ಆಕಸ್ಮಿಕವಾಗಿ ಕಾಲು ಜಾರಿ ಕೆರೆಯ ನೀರಿಗೆ ಬಿದ್ದು ಮೃತಪಟ್ಟಿದ್ದಾರೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.