ಗ್ರಾಮದ ಸ್ವಚ್ಚತೆಗೆ ನಮ್ಮ ಆದ್ಯತೆ: ಗ್ರಾಪಂ ಅದ್ಯಕ್ಷ ರಮ್ಲಾನ್

Update: 2018-07-23 18:02 GMT

ಫರಂಗಿಪೇಟೆ, ಜು. 23: ಪುದು ಗ್ರಾಮ ಪಂಚಾಯತ್ ಗ್ರಾಮಸಭೆ ಸುಜೀರ್ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ನಡೆಯಿತು.

ನೋಡಲ್ ಅಧಿಕಾರಿಯಾಗಿ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಮೋಹನ್ ಕುಮಾರ್ ಭಾಗವಹಿಸಿದ್ದರು. ಈ ಸಂದರ್ಭ ಮಾತನಾಡಿದ ಪುದು ಗ್ರಾಪಂ ಅಧ್ಯಕ್ಷ ರಮ್ಲಾನ್ ಮಾರಿಪ್ಪಳ್ಳ ಪುದು ಗ್ರಾಮದಲ್ಲಿ ತ್ಯಾಜ್ಯ ವಿಲೇವಾರಿ ನಡೆಸಲು ಸೂಕ್ತ ಸ್ಥಳ ಲಭಿಸದೇ ಇರುವುದರಿಂದ  ತ್ಯಾಜ್ಯ  ವಿಲೇವಾರಿ ನಡೆಸಲು ಸಾಧ್ಯವಾಗಿಲ್ಲ ಎಂದರು.

ಮಂಗಳೂರಿನ ಮಹಾನಗರ ಪಾಲಿಕೆ ಅಧಿಕಾರಿಗಳ ಜೊತೆ ಮಾತನಾಡಿ, ತ್ಯಾಜ್ಯ ವಿಲೇವಾರಿಗೆ ವ್ಯವಸ್ಥೆ ಕಲ್ಪಿಸುವ ಪ್ರಯತ್ನ ಮಾಡುತ್ತೇವೆ. ಸ್ವಚತೆ ಎಲ್ಲರ ಜವಾಬ್ದಾರಿಯಾಗಿದ್ದು ಗ್ರಾಮಸ್ಥರು ಸ್ವಚ್ಚತೆಗೆ ಪ್ರಾಶಸ್ತ್ಯ ನೀಡಬೇಕು. ಸ್ವಚ್ಚ ಗ್ರಾಮ ನಮ್ಮ ಪ್ರಥಮ ಆದ್ಯತೆಯಾಗಿದೆ ಎಂದರು.

ಮೆಸ್ಕಾಮ್ ಅಧಿಕಾರಿಗಳಿಗೆ ಗ್ರಾಮಸ್ಥರಿಂದ ತರಾಟೆ 

ಶಿಥಿಲಗೊಂಡ, ಮೂವತ್ತು ವರ್ಷಗಳ ಹಳೆಯದಾದ ವಿದ್ಯುತ್ ತಂತಿ, ವಾಲಿದ ಕಂಬ ಮುಂತಾದ ಸಮಸ್ಯೆಗಳ ಅಪಾಯದ ಬಗ್ಗೆ ಮೆಸ್ಕಾಮ್ ಗೆ ದೂರು ನೀಡಿದರೂ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದು ಮೆಸ್ಕಾಮ್ ಅಧಿಕಾರಿಗಳನ್ನು ಗ್ರಾಮಸ್ಥರು ತರಾಟೆಗೆ ತೆಗೆದರು.

ಈ ಸಂದರ್ಭ  ಪಿಡಿಒ ಪ್ರೇಮಲತಾ, ಗ್ರಾಪಂ ಉಪಾದ್ಯಕ್ಷೆ ಲಿಡಿಯಾ ಪಿಂಟೋ, ವಿವಿಧ ಇಲಾಖೆಯ ಅಧಿಕಾರಿಗಳು, ಗ್ರಾಪಂ ಸದಸ್ಯರು ಮತ್ತು ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News