ಆ.5ರಂದು ತಲಪಾಡಿ ಚಲೋ
Update: 2018-07-24 15:49 IST
ಮಂಗಳೂರು, ಜು.24: ಪಂಪ್‌ವೆಲ್, ತೊಕ್ಕೊಟ್ಟು, ತಲಪಾಡಿ ಹೆದ್ದಾರಿ ಅವ್ಯವಸ್ಥೆಯನ್ನು ಖಂಡಿಸಿ ಡಿವೈಎಫ್‌ಐ ಉಳ್ಳಾಲ ವಲಯ ಸಮಿತಿ ವತಿಯಿಂದ ಆ. 5ರಂದು ತಲಪಾಡಿ ಚಲೋ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.
ಸರ್ವಿಸ್ ರಸ್ತೆಗಳನ್ನು ತಕ್ಷಣ ಪೂರ್ಣಗೊಳಿಸಲು ಒತ್ತಾಯಿಸಿ, ತಲಪಾಡಿಯಲ್ಲಿ ಅಕ್ರಮ ಟೋಲ್ ಸಂಗ್ರಹ ಸ್ಥಗಿತಕ್ಕೆ ಆಗ್ರಹಿಸಿ ತೊಕ್ಕೊಟ್ಟಿನಿಂದ ತಲಪಾಡಿಯವರೆಗೆ ತೆರಳಿ ‘ತಲಪಾಡಿ ಚಲೋ’ನಡೆಸಲಾಗುತ್ತದೆ.
ಇದಕ್ಕೆ ಪೂರ್ವಭಾವಿಯಾಗಿ ನಡೆಸಲಾದ ಸಭೆಯಲ್ಲಿ ಡಿವೈಎಫ್‌ಐ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್, ಸಿಪಿಎಂ ಉಳ್ಳಾಲ ವಲಯ ಕಾರ್ಯದರ್ಶಿ ಕೃಷ್ಣಪ್ಪಸಾಲ್ಯಾನ್, ಸಿಡಬ್ಲುಎಫ್‌ಐ ಅಧ್ಯಕ್ಷ ಜನಾರ್ದನ್ ಕುತ್ತಾರ್, ಡಿವೈಎಫ್‌ಐ ಉಳ್ಳಾಲ ವಲಯ ಅಧ್ಯಕ್ಷ ಜೀವನ್ ರಾಜ್ ಕುತ್ತಾರ್, ಮುಖಂಡರಾದ ರಝಾಕ್ ಮೊಂಟೆಪದವು, ನಿತಿನ್ ಕುತ್ತಾರ್, ರಫೀಕ್ ಹರೇಕಳ, ಸಂತೋಷ್ ಪಿಲಾರ್, ನವೀನ್ ಕುಂಪಲ, ಅರುಣ್ ಕುಮಾರ್, ಮಹಾಬಲ ದೆಪ್ಪಲಿಮಾರ್, ಅಶ್ರಫ್ ಕೆ.ಸಿ.ರೋಡ್, ಸಂಕೇತ್ ಕಂಪ ಉಪಸ್ಥಿತರಿದ್ದರು.