ಉಡುಪಿ: ವಿಜ್ಞಾನ ಕ್ಷೇತ್ರದಲ್ಲಿ ಪಿಪಿಸಿ ವಿದ್ಯಾರ್ಥಿಗಳ ಸಾಧನೆ
Update: 2018-07-24 20:40 IST
ಉಡುಪಿ, ಜು.24: ವಿಜ್ಞಾನ ಕ್ಷೇತ್ರದಲ್ಲಿ ಉನ್ನತ ಅಧ್ಯಯನ ಹಾಗೂ ಸಂಶೋಧನೆಗೆ ಮೀಸಲಾದ ‘ಭಾರತ ರತ್ನ’ ಪ್ರಶಸ್ತಿ ವಿಜೇತ ವಿಜ್ಞಾನಿ ಡಾ.ಸಿ. ಎನ್.ಆರ್.ರಾವ್ ಅಧ್ಯಕ್ಷತೆಯ ಬೆಂಗಳೂರಿನ ಜವಾಹರಲಾಲ್ ನೆಹರು ಸೆಂಟರ್ ಫಾರ್ ಎಡ್ವಾನ್ಸಡ್ ಸೈನ್ಸ್ ಎಂಡ್ ರಿಸರ್ಚ್‌ನಲ್ಲಿ ನಡೆದ ರಸಾಯನ ಶಾಸ್ತ್ರ ಕ್ಷೇತ್ರದ ಯೋಜನಾಧಾರಿತ ಅಧ್ಯಯನಕ್ಕೆ ಉಡುಪಿ ಪೂರ್ಣಪ್ರಜ್ಞ ಕಾಲೇಜಿನ ಬಿ.ಎಸ್ಸಿ ವಿಭಾಗದ ಇಬ್ಬರು ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ.
ಅಂತಿಮ ಬಿಎಸ್ಸಿಯ ವಿದ್ಯಾರ್ಥಿ ಪುನೀತ್ ತೆಂಡೂಲ್ಕರ್ ಹಾಗೂ ದ್ವಿತೀಯ ಬಿಎಸ್ಸಿಯ ವರಲಕ್ಷ್ಮೀ ಆಯ್ಕೆಯಾದ ವಿದ್ಯಾರ್ಥಿಗಳು. ಅಧ್ಯಯನಕ್ಕೆ ಆಯ್ಕೆ ಯಾದ ದೇಶದ 10 ಮಂದಿ ಪ್ರತಿಭಾನ್ವಿತ ವಿದ್ಯಾರ್ಥಿಗಳಲ್ಲಿ ಇವರು ಇಬ್ಬರಾಗಿದ್ದಾರೆ. ಇವರಿಗೆ ಕೇಂದ್ರದ ಸಹಪ್ರಾಧ್ಯಾಪಕ ಸಬಾಸ್ಟಿಯನ್ ಪೀಟರ್ ಮಾರ್ಗದರ್ಶಕರಾಗಿದ್ದರು.