×
Ad

ಆರ್ಥಿಕ ಬಿಕ್ಕಟ್ಟು: ಸಿಪಿಇಸಿ ಯೋಜನೆಗಳು ಸ್ಥಗಿತ

Update: 2018-07-24 21:19 IST

ಇಸ್ಲಾಮಾಬಾದ್, ಜು. 24: ಪಾಕಿಸ್ತಾನದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿರುವ ಹಿನ್ನೆಲೆಯಲ್ಲಿ, 52 ಬಿಲಿಯ ಡಾಲರ್ (ಸುಮಾರು 3.58 ಲಕ್ಷ ರೂಪಾಯಿ) ವೆಚ್ಚದ ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್ (ಸಿಪಿಇಸಿ)ಗೆ ಸಂಬಂಧಿಸಿದ ಹಲವಾರು ರಸ್ತೆ ಯೋಜನೆಗಳು ನನೆಗುದಿಗೆ ಬಿದ್ದಿವೆ ಎಂದು ‘ಡಾನ್’ ಪತ್ರಿಕೆ ವರದಿ ಮಾಡಿದೆ.

ಗುತ್ತಿಗೆದಾರರ 500 ಕೋಟಿ ಪಾಕಿಸ್ತಾನಿ ರೂಪಾಯಿ ಮೊತ್ತದ ಚೆಕ್‌ಗಳು ಎರಡು ದಿನಗಳ ಹಿಂದೆ ಬೌನ್ಸ್ ಆದ ಬಳಿಕ, ಅವರು ಹಲವಾರು ಸಿಪಿಇಸಿ ಯೋಜನೆಗಳ ಕಾಮಗಾರಿಗಳನ್ನು ನಿಲ್ಲಿಸಿದ್ದಾರೆ.

ಆರ್ಥಿಕ ಕಾರಣಗಳಿಗಾಗಿ ಸಿಪಿಇಸಿ ಯೋಜನೆಗಳು ಸಂಕಷ್ಟಕ್ಕೆ ಸಿಲುಕಿರುವುದು ಇದೇ ಮೊದಲ ಬಾರಿಯಾಗಿದೆ ಎಂದು ಪತ್ರಿಕೆ ಹೇಳಿದೆ.

ಸಂಕಷ್ಟಕ್ಕೆ ಸಿಲುಕಿರುವ ಯೋಜನೆಗಳಲ್ಲಿ, ಸಿಪಿಇಸಿಯ ಪಶ್ಚಿಮ ಮಾರ್ಗ ಹಕ್ಲಾ-ದೇರಾ ಇಸ್ಮಾಯಿಲ್ ಖಾನ್ ಮತ್ತು ಕರಾಚಿ-ಲಾಹೋರ್ ಮೋಟರ್‌ವೇ (ಕೆಎಲ್‌ಎಂ)ಯ ಎಲ್ಲ ವಿಭಾಗಗಳು ಸೇರಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News