×
Ad

ಹಜ್: ಸೌದಿ ರೆಡ್ ಕ್ರೆಸೆಂಟ್‌ನಿಂದ 105 ತುರ್ತು ಕೇಂದ್ರಗಳು

Update: 2018-07-24 21:24 IST

ಜಿದ್ದಾ, ಜು. 24: ಮುಂಬರುವ ಹಜ್ ಋತುವಿಗಾಗಿ ಸೌದಿ ರೆಡ್ ಕ್ರೆಸೆಂಟ್ ಪ್ರಾಧಿಕಾರ ಸಿದ್ಧತೆಗಳನ್ನು ಆರಂಭಿಸಿದೆ ಎಂದು ಸೌದಿ ಪ್ರೆಸ್ ಏಜನ್ಸಿ ಸೋಮವಾರ ವರದಿ ಮಾಡಿದೆ.

ಈ ಸಂಘಟನೆಯು ಹಜ್ ಯಾತ್ರೆಯ ವೇಳೆ, ಮಕ್ಕಾ ಮಸೀದಿ ಮತ್ತು ಇತರ ಪವಿತ್ರ ಸ್ಥಳಗಳಲ್ಲಿ ಯಾತ್ರಿಕರಿಗೆ ತುರ್ತು ಸೇವೆಗಳನ್ನು ಒದಗಿಸಲಿದೆ. ಮದೀನಾದ ಪ್ರವಾದಿ ಮಸೀದಿಗೆ ಭೇಟಿ ನೀಡುವ ಯಾತ್ರಿಕಗರಿಗೂ ಅದು ಇದೇ ಸೇವೆಗಳನ್ನು ನೀಡಲಿದೆ.

 ಮಕ್ಕಾ ಮತ್ತು ಮದೀನಾಗಳಲ್ಲಿ ಈ ವರ್ಷ ಯಾತ್ರಿಕರಿಗೆ ಸೇವೆ ಸಲ್ಲಿಸುವುದಕ್ಕಾಗಿ ವೈದ್ಯರು, ಪರಿಣತರು, ಉಸ್ತುವಾರಿಗಳು ಮತ್ತು ತಂತ್ರಜ್ಞರು ಸೇರಿದಂತೆ ಸುಮಾರು 2,631 ಮಂದಿ ಪಾಳಿಯಲ್ಲಿ ಕೆಲಸ ನಿರ್ವಹಿಸಲಿದ್ದಾರೆ.

ಮಿನಾ, ಮುಝ್ದಲೀಫ ಮತ್ತು ಅರಫಾತ್ ಬೆಟ್ಟಗಳಲ್ಲಿರುವ ಪವಿತ್ರ ಸ್ಥಳಗಳಲ್ಲಿ ಸುಮಾರು 69 ತುರ್ತು ಸೇವೆ ಕೇಂದ್ರಗಳನ್ನು ರೆಡ್ ಕ್ರೆಸೆಂಟ್ ಸ್ಥಾಪಿಸಿದೆ.

ಮಕ್ಕಾದಲ್ಲಿ 36 ತುರ್ತು ಸೇವಾ ಕೇಂದ್ರಗಳು, 15 ಆ್ಯಂಬುಲೆನ್ಸ್‌ಗಳು ಮತ್ತು 27 ಮೋಟರ್‌ಸೈಕಲ್‌ಗಳನ್ನು ನಿಯೋಜಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News