ಜಾತಿ ತಾರತಮ್ಯ ನಿಷೇಧಿಸುವ ಮಸೂದೆ ಕೈಬಿಟ್ಟ ಬ್ರಿಟನ್

Update: 2018-07-24 16:05 GMT

ಲಂಡನ್, ಜು. 24: ಬ್ರಿಟನ್‌ನಲ್ಲಿ ಜಾತಿ ಆಧಾರಿತ ತಾರತಮ್ಯವನ್ನು ನಿಷೇಧಿಸುವುದಕ್ಕೆ ಸಂಬಂಧಿಸಿದ ಕಾನೂನು ತರುವ ವಿಚಾರವನ್ನು ತೆರೇಸಾ ಮೇ ಸರಕಾರ ಸೋಮವಾರ ಕೈಬಿಟ್ಟಿದೆ.

ಈ ವಿಷಯದಲ್ಲಿ ಬ್ರಿಟನ್‌ನ 15 ಲಕ್ಷ ಭಾರತೀಯ ಸಮುದಾಯ ತೀವ್ರ ಭಿನ್ನಾಭಿಪ್ರಾಯವನ್ನು ಹೊಂದಿದೆ.

ಬ್ರಿಟನ್‌ನಲ್ಲಿ ಜಾತಿ ಆಧಾರಿತ ತಾರತಮ್ಯ ಇಲ್ಲ ಎಂಬುದಾಗಿ ಪ್ರಭಾವಿ ಹಿಂದೂ, ಸಿಖ್ ಮತ್ತು ಜೈನ ಲಾಬಿಗಳು ಹೇಳಿದರೆ, ಈ ರೀತಿಯ ತಾರತಮ್ಯ ಇದೆ ಎಂದು ದಲಿತ ಗುಂಪುಗಳು ಮತ್ತು ಹಲವು ವ್ಯಕ್ತಿಗಳು ಅಭಿಪ್ರಾಯಪಟ್ಟಿದ್ದಾರೆ.

ಬ್ರಿಟನ್ ಸರಕಾರದ ನಿರ್ಧಾರವನ್ನು ಹಿಂದೂ ಗುಂಪುಗಳು ಶ್ಲಾಘಿಸಿದರೆ, ದಲಿತ ಗುಂಪುಗಳು ನಿರಾಶೆ ವ್ಯಕ್ತಪಡಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News