ಜು. 27ರಂದು ಅಪರೂಪದ ಖಗೋಳ ವಿಸ್ಮಯಕ್ಕೆ ಸಾಕ್ಷಿಯಾಗಲಿರುವ ಜಗತ್ತು !

Update: 2018-07-24 17:11 GMT

ಹೊಸದಿಲ್ಲಿ, ಜು.24: ಶುಕ್ರವಾರ ವಿಶ್ವವು ಅಪರೂಪದ ಖಗೋಳ ವಿಸ್ಮಯಕ್ಕೆ ಸಾಕ್ಷಿಯಾಗಲಿದೆ. ಈ ಶತಮಾನದ ಸುದೀರ್ಘಾವಧಿಯ ಚಂದ್ರಗ್ರಹಣ ಜುಲೈ 27ರಂದು ನಡೆಯಲಿದೆ. ಒಂದೂ ಮುಕ್ಕಾಲು ಗಂಟೆಯ ಅವಧಿಯ ಚಂದ್ರಗ್ರಹಣದ ಸಂದರ್ಭ ವಿಶ್ವದಾದ್ಯಂತದ ನಕ್ಷತ್ರ ವೀಕ್ಷಕರು ಸಂಪೂರ್ಣ ರಕ್ತವರ್ಣದ ಚಂದ್ರನನ್ನು ಕಾಣುವ ಅಪೂರ್ವ ಅವಕಾಶ ಒದಗಿ ಬರಲಿದೆ. ಸಂಪೂರ್ಣ ಗ್ರಹಣ ಹಿಡಿದಾಗ ಮತ್ತು ಸೂರ್ಯನ ಬೆಳಕಿನ ಕಾರಣ ಚಂದ್ರ ಕೆಂಪುಬಣ್ಣದಲ್ಲಿ ಕಾಣುತ್ತಾನೆ.

ಜುಲೈ 31ರಂದು ಮಂಗಳ ಗ್ರಹ ಭೂಮಿಗೆ ಅತ್ಯಂತ ಸನಿಹ ಬರಲಿದ್ದು, ಈ ಅಪೂರ್ವ ಕ್ಷಣದ ವೀಕ್ಷಣೆಗಾಗಿ ನಕ್ಷತ್ರ ವೀಕ್ಷಕರು ಕಾತರದಿಂದ ಕಾಯುತ್ತಿದ್ದಾರೆ. ಜುಲೈ 27ರಂದು ರಾತ್ರಿ 11:54 ಗಂಟೆಯಿಂದ ಭಾರತದಲ್ಲಿ ಕೇತುಗ್ರಸ್ಥ ಚಂದ್ರಗ್ರಹಣ ವೀಕ್ಷಿಸಬಹುದು.

ಜುಲೈ 27ರ ಗ್ರಹಣವನ್ನು ಭಾರತದಾದ್ಯಂತದ ಜನತೆ ಸಂಪೂರ್ಣ ವೀಕ್ಷಿಸಲು ಸಾಧ್ಯ ಎಂದು ದಿಲ್ಲಿಯ ಹವ್ಯಾಸಿ ಖಗೋಳಶಾಸ್ತ್ರಜ್ಞರ ಸಂಘದ ಅಜಯ್ ತಲ್ವಾರ್ ತಿಳಿಸಿದ್ದಾರೆ. ಯುರೋಪ್, ಆಫ್ರಿಕಾ, ಏಶ್ಯ, ಆಸ್ಟ್ರೇಲಿಯಾ ಮತ್ತು ದಕ್ಷಿಣ ಅಮೆರಿಕದಾದ್ಯಂತ ಈ ಅಪರೂಪದ ಖಗೋಳ ವಿದ್ಯಮಾನವನ್ನು ಕಾಣಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News