ಚೆನ್ನೈ ಎಕ್ಸ್‌ಪ್ರೆಸ್ ರೈಲಿನಲ್ಲಿ 65 ಕೆ.ಜಿ. ನಿಷೇಧಿತ ತಂಬಾಕು ಪತ್ತೆ

Update: 2018-07-24 17:23 GMT

ಮಂಗಳೂರು, ಜು.24: ಚೆನ್ನೈ ಎಕ್ಸ್‌ಪ್ರೆಸ್ ರೈಲಿನಲ್ಲಿ ರೈಲ್ವೆ ಸುರಕ್ಷತಾ ದಳ ಮಂಗಳವಾರ ನಡೆಸಿದ ವಿಶೇಷ ಕಾರ್ಯಾಚರಣೆ ಸಂದರ್ಭ 65 ಸಾವಿರ ರೂ. ಮೌಲ್ಯದ 65 ಕಿ.ಗ್ರಾಂ ನಿಷೇಧಿತ ತಂಬಾಕು ಪತ್ತೆಯಾಗಿದೆ.

ಚೆನ್ನೈ ಎಕ್ಸ್‌ಪ್ರೆಸ್ ರೈಲ್‌ನಲ್ಲಿ ಕಾನೂನು ಬಾಹಿರ ಚಟುವಟಿಕೆ ನಡೆಯುತ್ತಿದೆ ಎನ್ನುವ ಮಾಹಿತಿ ಆಧಾರದಲ್ಲಿ ಅಧಿಕಾರಿಗಳಾದ ಬಿನಯ್ ಕುರಿಯನ್, ಸುರೇಶನ್ ಪಿ., ರಾಜೇಶ್ ವಿ.ಟಿ. ಮತ್ತು ಮನೋಜ್ ಕೆ.ಸಿ. ಅವರ ತಂಡ ಕಾರ್ಯಾಚರಣೆ ನಡೆಸಿದೆ. ಈ ವೇಳೆ ಎಸ್-3 ಕೋಚ್‌ನಲ್ಲಿ ಸಂಶಯಾಸ್ಪದ ರೀತಿ ಯಲ್ಲಿ ಬ್ಯಾಗ್ ಗಮನಕ್ಕೆ ಬಂದಿದೆ. ಬ್ಯಾಗ್ ಬಗ್ಗೆ ವಿಚಾರಿಸಿದಾಗ ಯಾರು ಕೂಡ ಬ್ಯಾಗ್ ತಮ್ಮದೆಂದು ಒಪ್ಪಿಕೊಂಡಿಲ್ಲ.

ಬ್ಯಾಗ್ ತೆರೆದು ನೋಡಿದಾಗ ಅದರಲ್ಲಿ 65 ಕಿ.ಗ್ರಾಂ. ನಿಷೇಧಿತ ತಂಬಾಕು ಉತ್ಪನ್ನಗಳು ಪತ್ತೆಯಾಗಿವೆ. ಅವುಗಳನ್ನು ವಶಪಡಿಸಿಕೊಂಡು ಮುಂದಿನ ತನಿಖೆಗೆ ಅಬಕಾರಿ ಇಲಾಖೆಗೆ ಹಸ್ತಾಂತರಿಸಲಾಗಿದೆ ಎಂದು ಆರ್‌ಪಿಎಫ್ ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News