ಜಾಗರುಕರಾಗಿರಿ: ಟ್ರಂಪ್ ಬೆದರಿಕೆಗೆ ಇರಾನ್ ತಿರುಗೇಟು

Update: 2018-07-24 17:30 GMT

ಟೆಹರಾನ್, ಜು. 24: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಟ್ವಿಟರ್‌ನಲ್ಲಿ ಹಾಕಿರುವ ಬೆದರಿಕೆಗೆ ಇರಾನ್ ವಿದೇಶ ಸಚಿವ ಮುಹಮ್ಮದ್ ಜಾವೇದ್ ಶರೀಫ್ ಸೋಮವಾರ ತಿರುಗೇಟು ನೀಡಿದ್ದಾರೆ.

ಇರಾನ್ ನಾಯಕರನ್ನು ಉದ್ದೇಶಿಸಿ ಹಾಕಿರುವ ಬೆದರಿಕೆಗಳ ಮಾದರಿಯಲ್ಲೇ ಪ್ರತಿಕ್ರಿಯಿಸಿರುವ ಶರೀಫ್, ‘‘ಸಮಾಧಾನವಾಗಿಲ್ಲ... ನಾವು ಸಹಸ್ರಮಾನಗಳಿಂದ ಇಲ್ಲಿ ಇದ್ದೇವೆ ಹಾಗೂ ಕೆಲವು ದೇಶಗಳ ಜೀವಿತಾವಧಿಗಿಂತಲೂ ಹೆಚ್ಚಿನ ಆಯುಷ್ಯ ಹೊಂದಿದ್ದ ನಮ್ಮದೇ ಸಾಮ್ರಾಜ್ಯ ಸೇರಿದಂತೆ ಹಲವು ಸಾಮ್ರಾಜ್ಯಗಳು ಪತನಗೊಂಡಿರುವುದನ್ನು ನೋಡಿದ್ದೇವೆ. ಜಾಗರೂಕರಾಗಿರಿ!’’ ಎಂಬುದಾಗಿ ಟ್ವೀಟ್ ಮಾಡಿದ್ದಾರೆ.

ಇರಾನ್‌ನ ತೈಲ ರಫ್ತುಗಳನ್ನು ತಡೆಯಲು ಅಮೆರಿಕ ಯತ್ನಿಸಿದರೆ ಅದು ಸಮಾನ ಪ್ರತಿಕ್ರಿಯೆ ನೀಡಲಿದೆ. ಈ ನಿಟ್ಟಿನಲ್ಲಿ ಅಮೆರಿಕ ನಿಜವಾಗಿಯೂ ಮುಂದುವರಿದರೆ ಅದಕ್ಕೆ ಇರಾನ್ ಸರಿಯಾದ ಪ್ರತಿಯೇಟು ನೀಡಲಿದೆ.

ಬಹ್ರಮ್ ಕಾಸಿಮಿ, ಇರಾನ್ ವಿದೇಶ ವ್ಯವಹಾರಗಳ ಸಚಿವಾಲಯದ ವಕ್ತಾರ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News