ಜಪಾನ್ ಉಷ್ಣ ಮಾರುತ: ಕನಿಷ್ಠ 65 ಸಾವು

Update: 2018-07-24 17:40 GMT

ಟೋಕಿಯೊ, ಜು. 24: ಜಪಾನ್‌ನಲ್ಲಿ ಬೀಸುತ್ತಿರುವ ಉಷ್ಣ ಮಾರುತವನ್ನು ಪ್ರಾಕೃತಿಕ ವಿಪತ್ತು ಎಂಬುದಾಗಿ ದೇಶದ ಹವಾಮಾನ ಇಲಾಖೆ ಘೋಷಿಸಿದೆ.

ಕಳೆದ ವಾರ ಉಷ್ಣ ಮಾರುತಕ್ಕೆ ಸಿಲುಕಿ ಕನಿಷ್ಠ 65 ಮಂದಿ ಮೃತಪಟ್ಟಿರುವುದನ್ನು ಸ್ಮರಿಸಬಹುದಾಗಿದೆ.

ಉಷ್ಣತೆಯು ಐತಿಹಾಸಿಕ ಮಟ್ಟಕ್ಕೆ ಏರುತ್ತಿದ್ದು, 22,000ಕ್ಕೂ ಅಧಿಕ ಜನರು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಬಿಬಿಸಿ ವರದಿ ಮಾಡಿದೆ.

ಕಳೆದ 10 ವರ್ಷಗಳ ಅವಧಿಯಲ್ಲಿ ಉಷ್ಣ ಮಾರುತದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾದವರ ಸಂಖ್ಯೆಗೆ ಹೋಲಿಸಿದರೆ ಈ ವರ್ಷದ ಸಂಖ್ಯೆ ಗರಿಷ್ಠವಾಗಿದೆ.

 ಜುಲೈ ಮಧ್ಯಭಾಗದಿಂದ ಉಷ್ಣ ಮಾರುತ ಬೀಸಲು ಆರಂಭಗೊಂಡಿದ್ದು, ಸೈಟಮ ರಾಜ್ಯದ ಕುಮಗಯ ನಗರದಲ್ಲಿ ಸೋಮವಾರ 41.1 ಡಿಗ್ರಿ ಸೆಲ್ಸಿಯಸ್ ಐತಿಹಾಸಿಕ ಉಷ್ಣತೆ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News