ಫಾ. ಅಲೆಕ್ಸಾಂಡರ್ ಲೋಬೊ ನಿಧನ

Update: 2018-07-24 18:17 GMT

ಮಂಗಳೂರು, ಜು.24: ಮಂಗಳೂರು ಡಿಯೋಸಿಸ್‌ನ ಫಾ.ಅಲೆಕ್ಸಾಂಡರ್ ಲೋಬೊ (85) ಮಂಗಳವಾರ ಸಂಜೆ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ನಿಧನರಾದರು.

ಮಂಗಳೂರಿನ ಬಾಳೆಬೈಲ್‌ನಲ್ಲಿ ಜನಿಸಿದ ಫಾ.ಅಲೆಕ್ಸಾಂಡರ್ ಬಿಜೈ ಶಾಲೆಯಲ್ಲಿ ಆರಂಭಿಕ ಶಿಕ್ಷಣ ಪಡೆದರು. ಅವರಿಗೆ 1959ರ ವಾರ್ಚ್ 2ರಂದು ದೀಕ್ಷೆ ನೀಡಲಾಯಿತು. ಫಾ.ಲೋಬೊ ಅವರು ಮಿಲಾಗ್ರಿಸ್, ಕಲ್ಯಾಣಪುರ ಚರ್ಚ್ ಗಳಲ್ಲಿ ಸಹಾಯಕ ಪಾದ್ರಿಯಾಗಿ ಸೇವೆ ಸಲ್ಲಿಸಿದ್ದರು. ಕುಂದಾಪುರದ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾಗಿ ಮತ್ತು ಸಹಾಯಕ ಪಾದ್ರಿಯಾಗಿ ಏಳು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ.

ಫಾ.ಲೋಬೊ ಅವರಿಗೆ ಕರ್ನಾಟಕ ಸರಕಾರ 1990ರಲ್ಲಿ ರಾಜ್ಯ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಿದೆ. 1991ರಲ್ಲಿ ಅವರು ಶಿಕ್ಷಕ ವೃತ್ತಿಯಿಂದ ನಿವೃತ್ತಿ ಹೊಂದಿದರು. ಈ ಮಧ್ಯೆ ಹಲವು ಚರ್ಚ್‌ಗಳಲ್ಲಿ ಮುಖ್ಯ ಫಾದರ್ ಆಗಿ ಸೇವೆ ಸಲ್ಲಿಸಿದ ಅವರು 2003ರಿಂದ ನಿವೃತ್ತಿಯವರೆಗೂ ಶಂಕರಪುರದ ಸಂತ ಜಾನ್ ಇವಾಂಜೆಲಿಸ್ಟ್ ಚರ್ಚ್‌ನ ಫಾದರ್ ಆಗಿ ಸೇವೆಸಲ್ಲಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News