×
Ad

ಮಾಪಳಡ್ಕ : ದರ್ಸ್ ಮಹಾಸಭೆ, ಪದಾಧಿಕಾರಿಗಳ ಆಯ್ಕೆ

Update: 2018-07-25 20:32 IST
ಅಬ್ದುರ್ರಹೀಂ ಕೊಟ್ಯಾಡಿ

ಸುಳ್ಯ, ಜು.25: ಮಾಪಳಡ್ಕ ಮಖಾಮಿನಲ್ಲಿ ಕಲಿಯುತ್ತಿರುವ ದರ್ಸ್ ವಿದ್ಯಾರ್ಥಿಗಳ ಸಂಘಟನೆಯಾದ ‘ಮುರ್ಶಿದುಲ್ ಅನಾಂ ಸಾಹಿತ್ಯ ವೇದಿಕೆ’ಯ ಮಹಾಸಭೆಯು ಮಾಪಳಡ್ಕ ಮುದರ್ರಿಸ್ ಮುಹಮ್ಮದ್ ತೌಸೀಫ್ ಸಅದಿ ಹರೇಕಳ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ಮುಂದಿನ ಅವಧಿಯ ಪದಾಧಿಕಾರಿಗಳನ್ನು ಆರಿಸಲಾಯಿತು.

ಅಧ್ಯಕ್ಷರಾಗಿ ಅಬ್ದುರ್ರಹೀಂ ಕೊಟ್ಯಾಡಿ, ಉಪಾಧ್ಯಕ್ಷರಾಗಿ ಜಾಬಿರ್ ಅಮ್ಚಿನಡ್ಕ, ಸಿರಾಜುದ್ದೀನ್ ಕುಂಜಿಲ, ಪ್ರಧಾನ ಕಾರ್ಯದರ್ಶಿಯಾಗಿ ಅಬ್ದುರ್ರಝಾಕ್ ಹರೇಕಳ, ಜೊತೆ ಕಾರ್ಯದರ್ಶಿಗಳಾಗಿ ಶಮ್ಮಾಸ್‌ಪಳ್ಳಿಮಜಲು, ಮುಹಮ್ಮದ್ ರಿಯಾಝ್ ಈಶ್ವರಮಂಗಳ, ಕೋಶಾಧಿಕಾರಿಯಾಗಿ ಅರ್ಶದ್ ಅಯ್ಯಂಗೇರಿ, ಲೈಬ್ರರಿ ಮೇಲ್ವಿಚಾರಕರಾಗಿ ಶಫೀಕ್ ಈಶ್ವರಮಂಗಳ, ಸುಲ್ತಾನ್ ಹುಣಸೂರು, ಸ್ವಚ್ಚತಾ ಮೇಲ್ವಿಚಾರಕರಾಗಿ ಸ್ವಾದಿಕ್ ಕುಶಾಲನಗರ, ಆರಿಫ್ ಕರ್ನೂರು, ಮೆಡಿಕಲ್ ಮೇಲ್ವಿಚಾರಕರಾಗಿ ಸಾಬಿತ್ ಎಮ್ಮೆಮ್ಮಾಡು, ಆಶಿಕ್ ಕೊಯ್ಯೂರು ಹಾಗೂ ಸದಸ್ಯರುಗಳಾಗಿ ಆಬಿದ್ ಕನಕಮಜಲು, ಫಾಝಿಲ್ ಅಯ್ಯಂಗೇರಿ, ಅನ್ಸಾಫ್‌ಪಂಜ, ಮುಝ್ಝಮ್ಮಿಲ್ ಸುಣ್ಣಮೂಲೆ, ತಮೀಂ ವಗ್ಗ, ಹಾಶಿರ್ ಕೊಯ್ಯೂರು, ಸಿನಾನ್ ಇರುವಂಬಳ್ಳ, ಸವಾದ್ ಕಾವು ಅವರನ್ನು ಆರಿಸಲಾಯಿತು.

ಕನ್ವೀನರ್ ಅಬ್ದುರ್ರಹೀಂ ಕೊಟ್ಯಾಡಿ ಸ್ವಾಗತಿಸಿದರು. ನೂತನ ಕಾರ್ಯದರ್ಶಿ ಅಬ್ದುರ್ರಝಾಕ್ ಹರೇಕಳ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News