ಮಂಚಿ: ಗ್ರಾಮ ಪಂಚಾಯತ್ ವ್ಯಾಪ್ತಿಯ ಸಮಸ್ಯೆಗಳ ಪರಿಹಾರಕ್ಕೆ ಎಸ್ಡಿಪಿಐ ಮನವಿ
Update: 2018-07-25 22:43 IST
ಬಂಟ್ವಾಳ, ಜು. 25: ಮಂಚಿ ಗ್ರಾಮ ಪಂಚಾಯತ್ ವ್ಯಾಪ್ತಿಗೊಳಪಟ್ಟ ಹಲವಾರು ಸಮಸ್ಯೆಗಳನ್ನು ಪರಿಹರಿಸುವಂತೆ ಎಸ್‌ಡಿಪಿಐ ಮಂಚಿ ವಲಯ ಸಮಿತಿಯ ವತಿಯಿಂದ ಪಂಚಾಯತ್ ಅಭಿವೃದ್ಧಿ ಅಧಿಕಾರಿಗೆ ಹಾಗೂ ಅಧ್ಯಕ್ಷರಿಗೆ ಮಂಗಳವಾರ ಮನವಿಯನ್ನು ಸಲ್ಲಿಸಲಾಯಿತು.
ಕುಕ್ಕಾಜೆ (ಪಲ್ಲ) ಸರಕಾರಿ ಬಾವಿಯ ಅನಾಹುತದ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳುವ ಬಗ್ಗೆ, ನಿರ್ಬೈಲ್ ಮದಕ ಎಂಬಲ್ಲಿ ಅಪಾಯಕಾರಿ ಚರಂಡಿ ದುರಸ್ಥಿಗೊಳಿಸಲು ಹಾಗೂ ಕುಕ್ಕಾಜೆ ಮಾರ್ಕೆಟ್ ಸ್ವಚ್ಛತೆ ಹಾಗೂ ಭದ್ರತೆ ಮತ್ತು ಹಲವಾರು ಮೂಲಭೂತ ಸಮಸ್ಯೆಗಳ ಬಗ್ಗೆ ಚರ್ಚಿಸಿ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಎಸ್ಡಿಪಿಐ ಮುಖಂಡರಾದ ನವಾಝ್ ಕೋಡಿಬೈಲು, ಶರೀಫ್ ಕುಕ್ಕಾಜೆ, ಫೈಝಲ್ ಮಂಚಿ, ಸಿನಾನ್ ಕುಕ್ಕಾಜೆ, ಫರ್ಹಾನ್, ಜಬ್ಬಾರ್ ಮಂಚಿ ಹಾಜರಿದ್ದರು.