ಪುತ್ತೂರಿನ 7 ಸ್ಕೌಟ್ ಗೈಡ್ ವಿದ್ಯಾರ್ಥಿಗಳು, 2 ಶಿಕ್ಷಕಿಯರು ಆಯ್ಕೆ
ಪುತ್ತೂರು, ಜು. 25: ದೇಶಗಳ ಸಂಸ್ಕೃತಿಗಳ ಸಮ್ಮಿಲನದ ನಿಟ್ಟಿನಲ್ಲಿ ಜಪಾನ್‌ನ ದೇಶದ ಸೂಝು ಸಿಟಿಯಲ್ಲಿ ಅ.4 ರಿಂದ 10 ರತನಕ ನಡೆಯಲಿರುವ ‘17ನೇ ನಿಪೋನ್ ಸ್ಕೌಟ್ ಜಾಂಬೂರಿ ಉತ್ಸವ’ಕ್ಕೆ ಪುತ್ತೂರಿನ 3 ಶಿಕ್ಷಣ ಸಂಸ್ಥೆಗಳಿಂದ 7 ಮಂದಿ ವಿದ್ಯಾರ್ಥಿಗಳು ಮತ್ತು 2 ಮಂದಿ ಶಿಕ್ಷಕಿಯರು ಆಯ್ಕೆಗೊಂಡಿದ್ದು ಜು.30ಕ್ಕೆ ಮಂಗಳೂರು ಮತ್ತು 31ಕ್ಕೆ ಬೆಂಗಳೂರಿನಿಂದ ಎರಡು ತಂಡವಾಗಿ ದೆಹಲಿಗೆ ಹೋಗಿ ಬಳಿಕ ಅಲ್ಲಿಂದ ಜಪಾನಿಗೆ ತೆರಳಿ ಭಾರತವನ್ನು ಪ್ರತಿನಿಧಿಸಲಿದ್ದಾರೆ.
ಈ ಬಗ್ಗೆ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಗೈಡ್ಸ್ ಅಂಬಿಕಾ ವಿದ್ಯಾಲಯದ ದ್ವಿತಿಯ ಪಿಯುಸಿಯ ವಿದ್ಯಾರ್ಥಿನಿ ರಂಜಿತಾ ಹೇಮನಾಥ ಶೆಟ್ಟಿ ಅವರು ಸುದಾನ ವಸತಿಯುತ ಶಾಲೆಯಲ್ಲಿ ಶಿಕ್ಷಣ ಪಡೆಯುತ್ತಿದ್ದ ಸಮಯದಲ್ಲಿ ಆಯ್ಕೆಗೊಂಡು ಪ್ರಸ್ತುತ ಅಂಬಿಕಾ ವಿದ್ಯಾಲಯದಲ್ಲಿ ದ್ವಿತೀಯ ಪಿಯುಸಿ ಕಲಿಯುತ್ತಿರುವ ಗೈಡ್ಸ್ ರಂಜಿತಾ ಹೇಮನಾಥ ಶೆಟ್ಟಿ ಸೇರಿದಂತೆ ಇದೇ ಸಂಸ್ಥೆಯಲ್ಲಿ ವಿದ್ಯಾಬ್ಯಾಸ ಮಾಡುತ್ತಿರುವ ವಿಶಾಕ್, ಬೆಥನಿ ಶಿಕ್ಷಣ ಸಂಸ್ಥೆ ವಿದ್ಯಾರ್ಥಿಗಳಾದ ವಂಶಿಕಾ, ನಿಧಿ ಜಯಕುಮಾರ್, ಅರ್ಪಿತಾ ಕೆ.ಪಿ, ಶ್ರೀ ರಾಮಕೃಷ್ಣ ಪ್ರೌಢಶಾಲೆಯ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿ ದಿವಿತ್ ರೈ, ಧಿರೇಣ್ ಮತ್ತು ಆಯ್ಕೆಯಾಗಿದ್ದಾರೆ. ಇಬ್ಬರು ಗೈಡರ್ಸ್ ಆಗಿರುವ ರಾಮಕೃಷ್ಣ ಪ್ರೌಢಶಾಲೆಯ ಶಿಕ್ಷಕಿ ಸುನಿತಾ ಹಾಗೂ ಬೆಥನಿ ಪ್ರೌಢಶಾಲೆಯ ಶಿಕ್ಷಕಿ ಮೈತ್ರೀಯಿ ಅವರು ಜಪಾನಿನಲ್ಲಿ ನಡೆಯುವ ನಿಪೋನ್ ಸ್ಕೌಟ್ ಜಾಂಬೂರಿ ಉತ್ಸವದಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ.
ಜಪಾನ್‌ನಲ್ಲಿ ನಡೆಯುವ ಉತ್ಸವಕ್ಕೆ ಭಾರತವನ್ನು ಪ್ರತಿನಿಧಿಸಲು ತೆರಳುವ ವಿದ್ಯಾರ್ಥಿಗಳಿಗೆ ರೂ. 1.5 ಲಕ್ಷ ವೆಚ್ಚವಿದೆ. ಸರಕಾರದಿಂದ ಅಲ್ಪಸ್ವಲ್ಪ ಆರ್ಥಿಕ ನೆರವು ಸಿಗಲಿದೆ. ಆದರೆ ಅದು ಬರುತ್ತದೆ ಎಂಬ ಸಂಪೂರ್ಣಣ ನಿರೀಕ್ಷೆಯಿಲ್ಲ. ಪ್ರಸ್ತುತ ನಾವು ಜಪಾನ್‌ಗೆ ತೆರಳುವ ಒಟ್ಟು ಖರ್ಚು ರೂ.1.50 ಲಕ್ಷವನ್ನು ನಾವೇ ಭರಿಸಬೇಕಾಗಿದೆ. ಹಾರಾಡಿಯಲ್ಲಿ ಶಿಕ್ಷಕರ ಸಮಸ್ಯೆಯಲ್ಲಿ ರಾಜ್ಯಮಟ್ಟದಲ್ಲಿ ಗುರುತಿಸಲ್ಪಟ್ಟ ದಿವಿತ್ ರೈಗೆ ಶಿಕ್ಷಣ ಪೂರ್ಣ ಖರ್ಚು ಭರಿಸುವ ಎಂದು ಭರವಸೆ ನೀಡಿದ್ದ ಉಪಮುಖ್ಯಮಂತ್ರಿ ಡಾ. ಪರಮೇಶ್ವರ್ ಅವರು ಜಪಾನ್‌ಗೆ ಹೋಗಿ ಬರುವ ಎಲ್ಲಾ ಖರ್ಚನ್ನು ಭರಿಸಲಿದ್ದಾರೆ. ಉಳಿದ ವಿದ್ಯಾರ್ಥಿಗಳು ತಮ್ಮ ಹೆತ್ತವರ ಖರ್ಚಿನಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ ಎಂದು ಅವರು ತಿಳಿಸಿದರು.
ಜಪಾನ್‌ನಲ್ಲಿ ನಡೆಯುವ ಜಾಂಬೂರಿ ಉತ್ಸವದಲ್ಲಿ ಪಾಲ್ಗೊಳ್ಳುವಿಕೆ ಹೆಮ್ಮೆ ತಂದಿದೆ. ನಮ್ಮ ದೇಶದ ಸಂಸ್ಕೃತಿ ಪ್ರದರ್ಶನ ಮತ್ತು ಅವರ ಸಂಪ್ರದಾಯವನ್ನು ನಾವು ಅನುಕರಿಸುವುದರ ಮೂಲಕ ಸಂಸ್ಕೃತಿಕ ಸಮ್ಮಿಲನಗೊಳ್ಳಲಿದೆ. ಸುಮಾರು 216 ದೇಶಗಳಿಂದ ಆಯ್ಕೆಗೊಂಡ ಸುಮಾರು 80 ಸಾವಿರ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ. ದೇಶದಿಂದ 45 ಮತ್ತು ರಾಜ್ಯದಿಂದ 26 ಮಂದಿ ಉತ್ಸವದಲ್ಲಿ ಭಾಗವಹಿಸಲು ಆಯ್ಕೆಗೊಂಡಿದ್ದಾರೆ. ಅದರಲ್ಲೂ ಆ 26 ಮಂದಿಯೂ ದ.ಕ.ಜಿಲ್ಲೆಯವರಾಗಿದ್ದಾರೆ. ಯಾರಿಗೂ ಸಿಗದ ಅವಕಾಶಗಳು ನಮಗೆ ದೊರಕಿದೆ. ನಮಗೆ ಸಿಕ್ಕಿರುವುದು ಹೆಮ್ಮೆ ಎನಿಸಿದ್ದು ನಾನು 8 ವರ್ಷದಿಂದ ಸ್ಕೌಟ್, ಗೈಡ್ಸ್‌ನಲ್ಲಿ ಭಾಗವಹಿಸಿದ್ದೇನೆ. ಹೆತ್ತವರ ಪ್ರೇರಣೆಯಿಂದ ಭಾರತವನ್ನು ಪ್ರತಿನಿಧಿಸುವಲ್ಲಿ ನಮ್ಮ ಟೀಮ್ ಸಿದ್ಧವಾಗಿದೆ. ಈಗಾಗಲೇ ಸಚಿವ ಯು.ಟಿ.ಖಾದರ್, ಡಾ. ಜಯಮಾಲ ಸೇರಿದಂತೆ ಜಿ.ಪಂನಿಂದ ಶುಭ ಹಾರೈಕೆ ಪತ್ರ ಬಂದಿದೆ. ಪುತ್ತೂರು ಶಾಸಕರನ್ನು ಮತ್ತು ಸಹಾಯಕ ಕಮೀಷನರ್ ಹಾಗೂ ಬೆಂಗಳೂರಿನಲ್ಲಿ ಡಾ. ಪರಮೇಶ್ವರ ಮತ್ತು ಮುಖ್ಯಮಂತ್ರಿ ಕುಮಾರಸ್ವಾಮಿಯವರನ್ನು ಭೇಟಿ ಮಾಡಿ ಅಲ್ಲಿಂದ ದೆಹಲಿಗೆ ತೆರಳಿ ದೆಹಲಿಯಿಂದ ಅ.2ಕ್ಕೆ ರಾತ್ರಿ ಜಪಾನ್‌ಗೆ ತೆರಳಲಿದ್ದೇವೆ. ಜಪಾನ್‌ನಲ್ಲಿ ಕ್ಯಾಂಪ್ ಮುಗಿಸಿ ಅಲ್ಲಿಂದ ಅ.11ರಂದು ಹಿಂದುರಿಗಲಿದ್ದೇವೆ ರಂಜಿತಾ ಹೇಮನಾಥ ಶೆಟ್ಟಿ ಸ್ಕೌಟ್ಸ್ ಮತ್ತು ಗೈಡ್ಸ್‌ನಲ್ಲಿ ಪೂರ್ಣ ಮಟ್ಟದಲ್ಲಿ ತೊಡಗಿಸಿಕೊಂಡ ವಿದ್ಯಾರ್ಥಿಗಳ ಅವರ ಆಕ್ಟಿವಿಟಿಸ್ ನೋಡಿಕೊಂಡು ಆಯ್ಕೆ ಪ್ರಕ್ರಿಯೆ ನಡೆಯುತ್ತದೆ. ಜೊತೆಗೆ ತೃತೀಯ ಸೋಪಾನ ಪರೀಕ್ಷೆ ಬರೆದಿರಬೇಕು ಹಾಗೂ ವಿದ್ಯಾಥಿಗಳು 13 ವರ್ಷ ತುಂಬಿರಬೇಕು. ನಾನು ಕಳೆದ ಸಾಲಿಗೂ ಆಯ್ಕೆಗೊಂಡಿದ್ದೆ. ಆದರೆ ಆ ಸಂದರ್ಭ ಹೋಗಲು ಅನಾನುಕೂಲ ಆಗಿತ್ತು. ಈ ಭಾರಿ ಮತ್ತೊಮ್ಮೆ ಅವಕಾಶ ಒದಗಿ ಬಂದಿದೆ ಶಿಕ್ಷಕಿ ಸುನಿತಾ ತಿಳಿಸಿದ್ದಾರೆ.