ಮೆಹನ್ ಚೋಕ್ಸಿ ವಿವರ ಕೋರಿ ಆಂಟಿಗುವಾಕ್ಕೆ ಪತ್ರ ಬರೆದ ಸಿಬಿಐ
Update: 2018-07-25 22:55 IST
ಹೊಸದಿಲ್ಲಿ, ಜು. 24: ದೇಶದಿಂದ ಪರಾರಿಯಾಗಿರುವ ವಜ್ರೋದ್ಯಮಿ ಮಹುಲ್ ಚೋಕ್ಸಿ ಆಂಟಿಗುವಾಕ್ಕೆ ಪರಾರಿಯಾಗಿದ್ದಾರೆ ಎಂದು ಅಮೆರಿಕ ಭಾರತಕ್ಕೆ ಮಾಹಿತಿ ನೀಡಿದ ಎರಡು ದಿನಗಳ ಬಳಿಕ ಚೋಕ್ಸಿಯ ಇರುವಿಕೆಯ ಬಗ್ಗೆ ಹೆಚ್ಚಿನ ವಿವರ ನೀಡುವಂತೆ ಕೋರಿ ಆಂಟಿಗುವಾ ಆಡಳಿತಕ್ಕೆ ಸಿಬಿಐ ಪತ್ರ ಬರೆದಿದೆ.
ಬ್ಯಾಂಕ್‌ಗೆ 13,500 ಕೋ. ರೂ. ವಂಚನೆ ಎಸಗಿದ ಗೀತಾಂಜಲಿ ಜೆಮ್ಸ್‌ನ ಮಾಲಕ ಚೋಕ್ಸಿ ಹಾಗೂ ಆತನ ಸೋದರಳಿಯ ನೀರವ್ ಮೋದಿ ಅಮೆರಿಕದಲ್ಲಿ ಇಲ್ಲ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯಕ್ಕೆ ಅಮೆರಿಕ ಮಾಹಿತಿ ನೀಡಿತ್ತು. ಕೆರೆಬಿಯನ್‌ನಲ್ಲಿರುವ ಅನೇಕ ತೆರಿಗೆದಾರರ ಸ್ವರ್ಗಗಳಲ್ಲಿ ಆಂಟಿಗುವಾ ಕೂಡ ಒಂದು. ಇಲ್ಲಿ ಭಾರತದೊಂದಿಗೆ ಗಡಿಪಾರು ಒಪ್ಪಂದ ಇಲ್ಲ. ಇದರಿಂದ 59ರ ಹರೆಯದ ಮೆಹುಲ್ ಚೋಕ್ಸಿ ಅವರನ್ನು ಬೆನ್ನಟ್ಟಲು ಕಷ್ಟವಾಗುತ್ತಿದೆ. ಚೋಕ್ಸಿ ಆಂಟಿಗುವಾದ ನಾಗರಿಕತ್ವ ಪಡೆದಿರುವ ಸಾಧ್ಯತೆ ಇದೆ ಎಂದು ಭಾರತೀಯ ತನಿಖೆಗಾರರು ಸಂಶಯಿಸಿದ್ದಾರೆ.