ಬ್ರೈಟ್ ಮದನಿ ಇಂಗ್ಲಿಷ್ ಮೀಡಿಯಂ ಸ್ಕೂಲ್ ನಲ್ಲಿ ವನಮಹೋತ್ಸವ
ಉಳ್ಳಾಲ, ಜು. 25: ಸಸಿಗಳನ್ನು ನೆಡುವುದಕ್ಕೆ ಮಾತ್ರ ಸೀಮಿತವಾಗಿರದೇ ಅವುಗಳ ಪಾಲನೆ, ಪೋಷಣೆಯು ನಮ್ಮ ಜವಾಬ್ದಾರಿಯಾಗಿದೆ. ಪ್ರತಿಯೊಬ್ಬರಿಗೂ ಮರಗಳ ಮಹತ್ವ ಮತ್ತು ಹಾನಿಯಿಂದಾಗುವ ನಷ್ಟವನ್ನು ಮನದಟ್ಟು ಮಾಡಿ ಮುಂದಿನ ದಿನಗಳಲ್ಲಿ ಪ್ರಕೃತಿ ಅಭಿವೃದ್ದಿಯ ಲೆಕ್ಕಾಚಾರ ಮಾಡುವಂತಾದರೆ ವನಮಹೋತ್ಸವ ದಿನಕ್ಕೆ ಹೆಚ್ಚಿನ ಮಹತ್ವ ಬಂದಂತಾಗುತ್ತದೆ ಎಂದು ಬ್ರೈಟ್ ಮದನಿ ಇಂಗ್ಲಿಷ್ ಮೀಡಿಯಂ ಸ್ಕೂಲ್ ಅಧ್ಯಾಪಕಿ ನಾಝಿಯಾ ಅಮನ್ ಉಳ್ಳಾಲ್ ಹೇಳಿದರು.
ಇವರು ಇತ್ತೀಚಿಗೆ ಬ್ರೈಟ್ ಮದನಿ ಇಂಗ್ಲಿಷ್ ಮೀಡಿಯಂ ಸ್ಕೂಲ್ ಅಳೇಕಾಲ ಉಳ್ಳಾಲ ಇದರ ವತಿಯಿಂದ ನಡೆದ ವನಮಹೋತ್ಸವದಲ್ಲಿ ವನ ಮಹೋತ್ಸವದ ಅಗತ್ಯತೆಯ ಬಗ್ಗೆ ಕಾರ್ಯಕ್ರಮದಲ್ಲಿ ವಿವರಿಸಿದರು.
ಮುಖ್ಯ ಅತಿಥಿ ಗಳಾಗಿ ಮದನಿ ಎಜುಕೇಶನ್ ಅಸೋಸಿಯೇಶನ್ ಮುಖ್ಯ ಕಾರ್ಯದರ್ಶಿ ಡಾ. ಮುಹಮ್ಮದ್ ಪಂಡಿತ್ ಹಾಗೂ ಸಂಚಾಲಕ ಯು .ಎನ್ ಇಬ್ರಾಹಿಂ ಉಪಸ್ಥಿತರಿದ್ದರು. ಮುಖ್ಯ ಉಪಾಧ್ಯಾಯಿನಿ ಶ್ವೇತಾ ಶೆಟ್ಟಿ ಸ್ವಾಗತಿಸಿದರು. ಅಧ್ಯಾಪಕಿ ಜೋಶ್ನಾ ವಂದಿಸಿದರು. ಅಧ್ಯಾಪಕಿ ಸೌದ ಕಾರ್ಯಕ್ರಮ ನಿರೂಪಿಸಿದರು.