ಅಕ್ರಮ ಮದ್ಯ ಮಾರಾಟ: ಓರ್ವನ ಸೆರೆ
Update: 2018-07-25 23:24 IST
ಕುಂದಾಪುರ, ಜು.25: ಕೋಟೇಶ್ವರ ಬಾರ್ ಸಮೀಪದಲ್ಲಿ ಜು.25 ರಂದು ಬೆಳಗ್ಗೆ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಓರ್ವನನ್ನು ಕುಂದಾಪುರ ಪೊಲೀಸರು ಬಂಧಿಸಿದ್ದಾರೆ.
ಬಂಧಿತನನ್ನು ಗೋಳಿಹೊಳೆ ಗ್ರಾಮದ ಹೊಳೆಗದ್ದೆಯ ದುರ್ಗಾ ಪೂಜಾರಿ (58) ಎಂದು ಗುರುತಿಸಲಾಗಿದೆ. ಈತನಿಂದ ಸುಮಾರು 10,500 ರೂ. ಮದ್ಯ ಹಾಗೂ ಮದ್ಯ ಮಾರಾಟ ಮಾಡಿ ಬಂದ ಹಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.