×
Ad

ಅಪಘಾತ: ಗಾಯಾಳು ಯುವಕ ಮೃತ್ಯು

Update: 2018-07-25 23:30 IST

ಹೆಬ್ರಿ, ಜು.25: ಹೆಬ್ರಿಯ ಜರ್ವತ್ತು ಎಂಬಲ್ಲಿ ಸೋಮವಾರ ಸಂಜೆ ಸಂಭವಿಸಿದ ಅಪಘಾತದಲ್ಲಿ ಗಾಯಗೊಂಡಿದ್ದ ಮುದ್ರಾಡಿ ಬಲ್ಲಾಡಿಯ ಸದಾನಂದ ಕುಲಾಲ್‌ರ ಪುತ್ರ 21ರ ಹರೆಯದ ಸಚಿನ್ ಕುಲಾಲ್ ಚಿಕಿತ್ಸೆ ಫಲಕಾರಿಯಾಗದೇ ಮಂಗಳವಾರ ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಬೈಕ್ ಮತ್ತು ಟೆಂಪೋ ನಡುವಿನ ಮುಖಾಮುಖಿ ಢಿಕ್ಕಿಯಿಂದ ಗಂಭೀರ ವಾಗಿ ಗಾಯಗೊಂಡಿದ್ದ ಸಚಿನ್‌ರನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ನಿನ್ನೆ ಮೃತಪಟ್ಟಿದ್ದಾರೆ ಎಂದು ಪ್ರಕರಣ ದಾಖಲಿಸಿಕೊಂಡಿರುವ ಹೆಬ್ರಿ ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News