'ಸರಕಾರಿ ಶಾಲಾ ಕಾಲೇಜಿಗೆ ಉಚಿತ ಬಸ್ ಪಾಸ್ ಸ್ವಾಗತಾರ್ಹ'
Update: 2018-07-26 15:30 IST
ಮಂಗಳೂರು, ಜು. 26: ಸರಕಾರಿ ಶಾಲಾ ಕಾಲೇಜಿಗೆ ಉಚಿತ ಬಸ್ ಪಾಸ್ ನೀಡಿರುವುದು ಸ್ವಾಗತಾರ್ಹ ಎಂದು ಕರಾವಳಿ ವಿದ್ಯಾರ್ಥಿ ಸಂಘ ತಿಳಿಸಿದೆ.
ಉಡುಪಿ ಮತ್ತು ದ.ಕನ್ನಡದಲ್ಲಿ ಸರಕಾರಿ ಬಸ್ಸುಗಳ ಕೊರತೆ ಇರುವುದರಿಂದ ವಿದ್ಯಾರ್ಥಿಗಳು ಖಾಸಗಿ ಬಸ್ ನಲ್ಲಿ ಪ್ರಯಾಣಿಸುವುದು ಅನಿವಾರ್ಯವಾಗಿದೆ. ಹಾಗಾಗಿ ಉಚಿತ ಬಸ್ ಪಾಸ್ ನಿಂದ ಕರಾವಳಿಯ ವಿದ್ಯಾರ್ಥಿಗಳಿಗೆ ಯಾವುದೇ ಪ್ರಯೋಜನೆ ಇಲ್ಲ. ಕೆನರಾ ಬಸ್ ಮಾಲಿಕರ ಸಂಘ ನೀಡುವ ಬಸ್ ಪಾಸ್ ಪ್ರತಿ ವಿದ್ಯಾರ್ಥಿಗಳಿಗೆ ಶೇ 50% ರಷ್ಟು ವಿನಾಯಿತಿ ನೀಡುತ್ತದೆ. ಆದರೂ ಒಬ್ಬ ವಿದ್ಯಾರ್ಥಿ ದಿನಕ್ಕೆ 40 ರಿಂದ 60 ರುಪಾಯಿಯಷ್ಟು ಟಿಕೇಟು ಪಾವತಿಸಿಯೇ ಪ್ರಯಾಣ ಮಾಡಬೇಕಾಗುತ್ತದೆ ಎಂದರು.
ಸರಕಾರಿ ಬಸ್ಸುಗಳ ಪೂರೈಕೆ ಸಧ್ಯಕ್ಕೆ ಸಾಧ್ಯವಾಗದ ಮಾತು. ನೀವು ಮನಸು ಮಾಡಿದರೆ ಖಾಸಗಿ ಬಸ್ಸುಗಳಲ್ಲಿ ವಿದ್ಯಾರ್ಥಿಗಳು ಇಂತಿಷ್ಟು ಹಣ ಪಾವತಿಸಿ ವಾರ್ಷಿಕ ಬಸ್ ಪಾಸ್ ಪಡೆಯಲು ಅನುಕೂಲಕರ ಅವಕಾಶ ಮಾಡಿಕೊಡಬಹುದು ಎಂದು ವಿದ್ಯಾರ್ಥಿ ಸಂಘ ಮುಖ್ಯಮಂತ್ರಿಗೆ ಮನವಿ ಮಾಡಿದೆ.