×
Ad

ಭಾರತದ ಡಾ. ಭರತ್ ವಾತ್ವಾನಿ, ಸೋನಂ ವಾಂಗ್ಚುಕ್ ಗೆ ಪ್ರತಿಷ್ಠಿತ ಮ್ಯಾಗ್ಸೇಸೆ ಪ್ರಶಸ್ತಿ

Update: 2018-07-26 16:10 IST
ಸೋನಂ ವಾಂಗ್ಚುಕ್, ಡಾ. ಭರತ್ ವಾತ್ವಾನಿ

ಮನಿಲಾ,ಜು.26 : ಈ ವರ್ಷದ ಪ್ರತಿಷ್ಠಿತ ರಾಮನ್ ಮ್ಯಾಗ್ಸೇಸೆ ಪ್ರಶಸ್ತಿ ವಿಜೇತರಲ್ಲಿ ಭಾರತದ ಡಾ. ಭರತ್ ವಾತ್ವಾನಿ ಹಾಗೂ ಸೋನಂ ವಾಂಗ್ಚುಕ್ ಸೇರಿದ್ದಾರೆ. ಭರತ್ ಅವರು   ರಸ್ತೆಗಳಲ್ಲಿ ಕಂಡು ಬಂದ ಸಾವಿರಾರು ಮಾನಸಿಕ ಅಸ್ವಸ್ಥರಿಗೆ ಚಿಕಿತ್ಸೆ ನೀಡಿ ಅವರನ್ನು ಅವರ ಕುಟುಂಬದ ಜತೆ ಸೇರುವಂತೆ ಮಾಡಿದ ತಮ್ಮ ಮಹತ್ಕಾರ್ಯಕ್ಕಾಗಿ ಈ ಪ್ರಶಸ್ತಿ ಪಡೆದಿದ್ದರೆ, ಸೋನಂ ವಾಂಗ್ಚುಕ್ ಅವರು   ಪ್ರಕೃತಿ, ಸಂಸ್ಕೃತಿ ಹಾಗೂ ಶಿಕ್ಷಣದ ಮೂಲಕ ಸಮುದಾಯದ ಪ್ರಗತಿಗಾಗಿ ಶ್ರಮಿಸಿ ಅತ್ಯುನ್ನತ ಸೇವೆ ಒದಗಿಸಿದ್ದಕ್ಕಾಗಿ ಈ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.

ಢಾ ಭರತ್ ವಾತ್ವಾನಿ ತಮ್ಮ ಪತ್ನಿಯೊಂದಿಗೆ  ಸೇರಿ ನಿರ್ಗತಿಕ ಮಾನಸಿಕ ಅಸ್ವಸ್ಥರನ್ನು ತಮ್ಮ ಖಾಸಗಿ ಕ್ಲಿನಿಕ್ ಗೆ ಕರೆ ತಂದು ಚಿಕಿತ್ಸೆ ಕೊಡಿಸಿದ್ದರು. ಇದಕ್ಕಾಗಿ ಅವರು 1988ರಲ್ಲಿ ಶ್ರದ್ಧಾ ರಿಹ್ಯಾಬಿಲಿಟೇಶನ್ ಫೌಂಡೇಶನ್ ಸ್ಥಾಪಿಸಿದ್ದರು.  ತಾವು ರಕ್ಷಿಸಿದ ಮಾನಸಿಕ ಅಸ್ವಸ್ಥರಿಗೆ ಅವರು ಆಹಾರ, ಆಶ್ರಯ ಕೂಡ ಒದಗಿಸಿದ್ದರು. ಈ ಕಾರ್ಯದಲ್ಲಿ ಅವರೊಂದಿಗೆ  ಅವರು ಪೊಲೀಸ್ ಇಲಾಖೆ ಹಾಗೂ ಇತರರು ಕೂಡ ಕೈಜೋಡಿಸಿದ್ದರು.

ಅತ್ತ ಸೋನಂ ವಾಂಗ್ಚುಕ್ ಅವರು 1988ರಲ್ಲಿ ತಮ್ಮ ಇಂಜಿನಿಯರಿಂಗ್ ಪದವಿ ಪಡೆದ ನಂತರ ಸ್ಟೂಡೆಂಟ್ಸ್ ಎಜುಕೇಶನ್ ಎಂಡ್ ಕಲ್ಚರಲ್ ಮೂವ್ಮೆಂಟ್ ಆಫ್ ಲಡಾಖ್  ಸ್ಥಾಪಿಸಿ  ಪರೀಕ್ಷೆಗಳಲ್ಲಿ  ಶೇ 95ರಷ್ಟು ಲಡಾಖ್ ವಾಸಿಗಳು ಅನುತ್ತೀರ್ಣರಾಗುತ್ತಾರೆಂದು ತಿಳಿದು ಅವರಿಗೆ ಕೋಚಿಂಗ್ ನೀಡುವ ಕಾರ್ಯ ಆರಂಭಿಸಿದ್ದರು. 1944ರಲ್ಲಿ ಅವರು ಆಪರೇಶನ್ ನ್ಯೂ ಹೋಪ್ ಆರಂಭಿಸಿದ್ದರು. ಇಲ್ಲಿಯ ತನಕ ಅವರ ಸಂಸ್ಥೆ  700 ಶಿಕ್ಷಕರನ್ನು ಹಾಗೂ 1000 ಮಂದಿ ಇತರರಿಗೆ ತರಬೇತಿ ನೀಡಿದ ಪರಿಣಾಮ ರಾಜ್ಯದಲ್ಲಿ 1996ರಲ್ಲಿ ಶೇ 5ರಷ್ಟಿದ್ದ ಹತ್ತನೇ ತರಗತಿ ಫಲಿತಾಂಶವನ್ನು 2015ರ ವೇಳೆಗೆ ಶೇ 75ರಷ್ಟು ಏರಿಕೆಯಾಗಲು ಕಾರಣೀಕರ್ತರಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News