×
Ad

ಕೇಮಾರು ಶ್ರೀಗೆ ಬೆದರಿಕೆ: ಪ್ರಕರಣ ದಾಖಲು

Update: 2018-07-26 18:29 IST

ಮೂಡುಬಿದಿರೆ, ಜು.26: ಶಿರೂರು ಶ್ರೀ ಸಾವಿಗೆ ಸಂಬಂಧಿಸಿ ತನಿಖೆಗೆ ಆಗ್ರಹಿಸಿದ ಕೇಮಾರು ಶ್ರೀ ಈಶ ವಿಠಲದಾಸ ಸ್ವಾಮೀಜಿಗೆ ಫೇಸ್‌ಬುಕ್ ಸೇರಿದಂತೆ ಸಾಮಾಜಿಕ ತಾಣಗಳಲ್ಲಿ ನಿಂದನೆ ಹಾಗೂ ಪರೋಕ್ಷ ಬೆದರಿಕೆಗಳು ಬರುತ್ತಿದ್ದ ಹಿನ್ನೆಲೆಯಲ್ಲಿ ಈ ಬಗ್ಗೆ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ಕೇಮಾರು ಶ್ರೀ ಶಿಷ್ಯವರ್ಗಕ್ಕೆ ಸೇರಿದ ಕೃಷ್ಣ ಪೂಜಾರಿ ಎಂಬವರು ಮೂಡುಬಿದಿರೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಸಮಾಜ ಸೇವೆಯಲ್ಲಿ ನಿರತರಾಗಿರುವ ಕೇಮಾರು ಶ್ರೀ ಹೆಸರನ್ನು ಕಿಡಿಗೇಡಿಗಳು ಹಾಳು ಮಾಡುತ್ತಿದ್ದು, ಸಾಮಾಜಿಕ ಜಾಲತಾಣದ ಮೂಲಕ ನಿಂದನಾತ್ಮಕ ಬರಹಗಳನ್ನು ಮತ್ತು ಬೆದರಿಕೆಗಳನ್ನು ಒಡ್ಡಿರುತ್ತಾರೆ. ಫೇಸ್‌ಬುಕ್ ನಲ್ಲಿ ಎಸ್.ಎಮ್ ವನಮಾಲಿ ಎನ್ನುವ ಖಾತೆ ಮತ್ತು ಮಂಜುನಾಥ ಉಡುಪ ಕುಂತರ ಎಂದು ನಮೂದಿಸಲ್ಪಡುವ ಫೇಸ್ ಬುಕ್ ಪೇಜ್‌ನಲ್ಲಿ ಕೇಮಾರು ಶ್ರೀಯ ಭಾವಚಿತ್ರ ಹಾಕಿ ನಿಂದನಾತ್ಮಕ ಬರಹದ ಜೊತೆಗೆ ಬೆದರಿಕೆಯ ಕಾಮೆಂಟ್‌ಗಳನ್ನು ಮಾಡಲಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. 

ಈ ಬಗ್ಗೆ ಮೂಡುಬಿದಿರೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News