×
Ad

​ಜು.27: ಝೀನತ್ ಬಕ್ಷ್, ಈದ್ಗಾ ಮಸೀದಿಯಲ್ಲಿ ಚಂದ್ರಗ್ರಹಣ ನಮಾಝ್

Update: 2018-07-26 19:15 IST

ಮಂಗಳೂರು, ಜು.26: ಶತಮಾನದ ಅತ್ಯಂತ ದೀರ್ಘಾವಧಿಯ ಚಂದ್ರಗ್ರಹಣವು ಜು.27ರ ಶುಕ್ರವಾರ ರಾತ್ರಿ ಇರುವುದರಿಂದ ಸಾಧ್ಯವಿರುವವರು ಗ್ರಹಣ ನಮಾಝ್ ಮಾಡಲು ದ.ಕ.ಜಿಲ್ಲಾ ಖಾಝಿ ಅಲ್‌ಹಾಜ್ ತ್ವಾಕಾ ಅಹ್ಮದ್ ಮುಸ್ಲಿಯಾರ್ ಸೂಚಿಸಿದ್ದಾರೆ.

ಶುಕ್ರವಾರ ರಾತ್ರಿ 12 ಗಂಟೆಗೆ ಮಂಗಳೂರು ಝೀನತ್ ಬಕ್ಷ್ ಹಾಗೂ ಈದ್ಗಾ ಜುಮಾ ಮಸೀದಿಯಲ್ಲಿ ಗ್ರಹಣ ನಮಾಝ್ ನಿರ್ವಹಿಸಲಾಗುವುದು ಎಂದು ಝೀನತ್ ಬಕ್ಷ್ ಮತ್ತು ಈದ್ಗಾ ಜುಮಾ ಮಸೀದಿಯ ಅಧ್ಯಕ್ಷ ಹಾಜಿ ವೈ. ಅಬ್ದುಲ್ಲಾ ಕುಂಞಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News