ಮಂಗಳೂರು: ಜಿಲ್ಲಾ ಗೃಹರಕ್ಷಕ ದಳದಿಂದ ಕಾರ್ಗಿಲ್ ದಿನಾಚರಣೆ
ಮಂಗಳೂರು, ಜು.26: ಜಿಲ್ಲಾ ಗೃಹರಕ್ಷಕ ದಳದಿಂದ ನಗರದ ಮೇರಿಹಿಲ್ ಕಚೇರಿಯಲ್ಲಿ ಗುರುವಾರ ವಾರದ ಕವಾಯತು ನಡೆಸಿ, ಕಾರ್ಗಿಲ್ ದಿನಾಚರಣೆಯ ಅಂಗವಾಗಿ ಕಾರ್ಗಿಲ್‌ನಲ್ಲಿ ಹುತಾತ್ಮರಾದವರಿಗೆ ಗೌರವ ನಮನ ಸಲ್ಲಿಸುತ್ತಾ, ಕಾರ್ಗಿಲ್ ವಿಜಯೋತ್ಸವ ಆಚರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಗೃಹರಕ್ಷಕ ದಳದ ಕಮಾಂಡೆಂಟ್ ಡಾ.ಮುರಲಿ ಮೋಹನ್ ಚೂಂತಾರು ವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ಮುಖ್ಯಅತಿಥಿಗಳಾಗಿ ಶಾಸಕ ಭರತ್ ಶೆಟ್ಟಿ ವೈ. ಮಾತನಾಡಿದರು.
ಕಾರ್ಯಕ್ರಮದಲ್ಲಿ ಮಾಜಿ ಸೈನಿಕ ಸಂಘದ ಅಧ್ಯಕ್ಷ ವಿಕ್ರಂದತ್ತ, ಲಯನ್ಸ್ ಅಧ್ಯಕ್ಷ ವಿಜಯ್‌ವಿಷ್ಣು ಮಯ್ಯ, ಲಯನ್ಸ್ ಕಾರ್ಯದರ್ಶಿ ಹೇಮಾ ರಾವ್, ಲಯನೆಸ್ ಅಧ್ಯಕ್ಷೆ ಜ್ಯೋತಿ ಶೆಟ್ಟಿ, ಲಯನ್ಸ್ ಸದಸ್ಯರಾದ ಗುರುಪ್ರೀತ್, ನ್ಯಾನ್ಸಿ ಮಸ್ಕರೇನಸ್ ಉಪಸ್ಥಿತರಿದ್ದರು.
ಜಿಲ್ಲಾ ಗೃಹರಕ್ಷಕ ದಳದ ಉಪಸಮಾದೇಷ್ಟ ರಮೇಶ್ ವಂದಿಸಿದರು. ಮಂಗಳೂರು ಘಟಕದ ಘಟಕಾಧಿಕಾರಿ ಮಾರ್ಕ್‌ಶೇರಾ, ಮಂಗಳೂರು ಘಟಕದ ಗೃಹರಕ್ಷಕ, ಗೃಹರಕ್ಷಕಿಯರು ಸೇರಿದಂತೆ ಸುಮಾರು 105ಕ್ಕೂ ಹೆಚ್ಚು ಮಂದಿ ಗೃಹರಕ್ಷಕರು ಭಾಗವಹಿಸಿದ್ದರು.