ಜು.29ರಂದು ಸೋಲಾರ್ ಕುಕ್ಕರ್ ಪುಸ್ತಕ ಲೋಕಾರ್ಪಣೆ
ಉಡುಪಿ, ಜು.26: ಮಾಲಿನ್ಯ ರಹಿತ ಹಾಗೂ ಪ್ರಕೃತಿಯಲ್ಲಿ ಉಚಿತ, ಧಾರಾಳವಾಗಿ ಲಭ್ಯವಿರುವ ಸೌರಶಕ್ತಿಯನ್ನು ಬಳಸಿ ಕಾರ್ಯನಿರ್ವಹಿಸುವ ಸೌರ ಒಲೆಗಳ ರಚನೆ ಹಾಗೂ ಸುಧಾರಣೆಗಳ ಬಗ್ಗೆ ಸಂಶೋಧನೆ ನಡೆಸುತ್ತಿರುವ ಡಾ.ಅಶೋಕ್ ಕುಂದಾಪುರ ಬರೆದಿರುವ ಸೋಲಾರ್ ಕುಕ್ಕರ್ (ಸೌರ ಒಲೆಗಳ ವಿಸ್ಕೃತ ಸಂಕಲನ) ಜು.29ರಂದು ಸಂಜೆ 4:30ಕ್ಕೆ ಉಡುಪಿ ಎಂಜಿಎಂ ಕಾಲೇಜಿನ ಗೀತಾಂಜಲಿ ಸಾಂಗಣದಲ್ಲಿ ಲೋಕಾರ್ಪಣೆಗೊಳ್ಳಲಿದೆ.
ಗುರುವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಾ.ಅಶೋಕ್ ಕುಂದಾಪುರ, ಮಣಿಪಾಲ ಎಂಐಟಿ ನಿರ್ದೇಶಕ ಡಾ. ಶ್ರೀಕಾಂತ್ ರಾವ್ ಡಿ. ಪುಸ್ತಕ ಬಿಡುಗಡೆಗೊಳಿಸಲಿದ್ದಾರೆ. ಎಂಐಟಿಯ ಸಹಾಯಕ ಪ್ರಾಧ್ಯಾಪಕ ಡಾ. ಅರುಣಾಚಲ ಚಂದಾವರ್ ಪುಸ್ತಕ ಪರಿಚಯ ಮಾಡಲಿದ್ದಾರೆ. ಎಂಜಿಎಂ ಕಾಲೇಜಿನ ಪ್ರಾಂಶುಪಾಲ ಡಾ. ವಿಜಯ ಎಂ.ಜಿ. ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.
1999ರಲ್ಲಿ ಜರ್ಮನಿಯ ಲೇಖಕರೊಬ್ಬರು ಸೌರ ಒಲೆಯ ಕುರಿತು ಬರೆದ ಪುಸ್ತಕದ ಬಳಿಕ ಈ ಶತಮಾನದಲ್ಲಿ ರಚಿಸಿದ ವಿಸ್ಕೃತ ವಿಮರ್ಶನಾತ್ಮಕ ಗ್ರಂಥ ಇದಾಗಿದೆ. ಸೌರ ಒಲೆಗಳನ್ನು ಸುಲಭವಾಗಿ ಸೂರ್ಯಾಭಿಮುಖವಾಗಿ ತಿರುಗಿಸಲು ಯಂತ್ರಗಳ ಉಲ್ಲೇಖ ಇದರಲ್ಲಿದೆ. 50, 100 ರೂ. ವೆಚ್ಚದಲ್ಲಿ ಸ್ಥಳೀಯವಾಗಿ ಲಭ್ಯವಿರುವ ವಸ್ತುಗಳಿಂದ ತಯಾರಿಸಬಹುದಾದ ಸೌರ ಒಲೆಗಳ ಮಾದರಿಗಳನ್ನು ವಿವರಣೆ ಸಹಿತ ಈ ಪುಸ್ತಕದಲ್ಲಿ ಹೇಳಲಾಗಿದೆ ಎಂದು ಪರಿಸರ ತಜ್ಞರೂ, ಜಿಲ್ಲೆಯ ಹಲವು ಪರಿಸರ ಹೋರಾಟಗಳಲ್ಲಿ ಪಾಲ್ಗೊಂಡಿರುವ ಡಾ.ಅಶೋಕ್ ತಿಳಿಸಿದರು.
ಸೌರ ಒಲೆಗಳ ಕುರಿತಂತೆ ಭಾರತೀಯ ವಿಜ್ಞಾನಿಗಳ ಸಾಧನೆ ಹಾಗೂ ವಿಶ್ವದಾದ್ಯಂತದ ವಿನ್ಯಾಸಕರು ರಚಿಸಿರುವ ಸುಮಾರು 270 ಸೌರ ಒಲೆಗಳ ಮಾದರಿಯನ್ನು ಪುಸ್ತಕ ಒಳಗೊಂಡಿದೆ. ಪುಸ್ತಕದ ಬೆಲೆ 5,500 ರೂ.ಆಗಿದ್ದರೂ, ಜು.29ರದು 2,000 ರೂ.ಗೆ ಆಸಕ್ತರಿಗೆ ಲಭ್ಯವಿದೆ ಎಂದರು.
ಸಮುದ್ರದ ಅಲೆಯಿಂದ ವಿದ್ಯುತ್: ತಾವು ಸಮುದ್ರದ ಅಲೆಗಳಿಂದ ವಿದ್ಯುತ್ ಉತ್ಪಾದಿಸುವ ಕುರಿತು ಸಂಶೋಧನೆ ನಡೆಸಿದ್ದು, ಇದನ್ನು ಕಾರ್ಯರೂಪಕ್ಕಿಳಿಸಲು ತನಗೆ ಸರಕಾರ ಅಥವಾ ಖಾಸಗಿ ವ್ಯಕ್ತಿಗಳಿಂದ ಸೂಕ್ತ ಪ್ರೋತ್ಸಾಹ ದೊರಕುತ್ತಿಲ್ಲ. ಯಾರಾದರೂ ಹಣಕಾಸು ನೆರವು ನೀಡಿದರೆ ಹೆಚ್ಚು ದಕ್ಷ ಮಾದರಿಯನ್ನು ನೀಡುವುದಾಗಿ ಾ.ಅಶೋಕ್ ಕುಂದಾಪುರ ತಿಳಿಸಿದರು.
ಮೊದಲಿಗೆ ಪ್ರಾಯೋಗಿಕವಾಗಿ 2 ಮೆಗಾ ವ್ಯಾಟ್ ಉತ್ಪಾದನೆ ಮಾಡಲು ಸಿದ್ದನಿದ್ದೇನೆ.ಸಮುದ್ರ ಅಲೆಗಳಿಂದ ಸುಮಾರು 10 ಮಿಲಿಯನ್ ಮೆಗಾವ್ಯಾಟ್ ನಷ್ಟು ವಿದ್ಯುತ್ ಉತ್ಪಾದನೆ ಸಾಧ್ಯವಿದ್ದು, ಇದರಿಂದ ಜಿಲ್ಲೆಯ ಎಲ್ಲಾ ಮನೆಗಳಿಗೆ ಹಾಗೂಇತರ ಬಳಕೆಗೂ ವಿದ್ಯುತ್‌ನು್ನ ಉಪಯೋಗಿಸಲು ಸಾಧ್ಯವಿದೆ ಎಂದರು.
ಮೊದಲಿಗೆ ಪ್ರಾಯೋಗಿಕವಾಗಿ 2 ಮೆಗಾ ವ್ಯಾಟ್ ಉತ್ಪಾದನೆ ಮಾಡಲು ಸಿದ್ದನಿದ್ದೇನೆ.ಸಮುದ್ರ ಅಲೆಗಳಿಂದ ಸುಮಾರು 10 ಮಿಲಿಯನ್ ಮೆಗಾವ್ಯಾಟ್ ನಷ್ಟು ವಿದ್ಯುತ್ ಉತ್ಪಾದನೆ ಸ್ಯಾವಿದ್ದು,ಇದರಿಂದಜಿಲ್ಲೆಯಎಲ್ಲಾಮನೆಗಳಿಗೆಹಾಗೂಇತರಬಳಕೆಗೂವಿದ್ಯುತ್‌ನ್ನುಉಪಯೋಗಿಸಲುಸ್ಯಾವಿದೆ ಎಂದರು.
ಕೇಂದ್ರ ಅಥವಾ ರಾಜ್ಯ ಸರಕಾರ ನಾನು ಕಳುಹಿಸಿದ ಪ್ರಸ್ತಾವಕ್ಕೆ ಯಾವುದೇ ಮಾನ್ಯತೆ ನೀಡುತ್ತಿಲ್ಲ. ಪ್ರಧಾನಿ ಮೋದಿಗೂ ಪ್ರಸ್ತಾಪ ಕಳುಹಿಸಿದ್ದು, ಅಲ್ಲಿಂದ ಈವರೆಗೆ ಯಾವುದೇ ಸ್ಪಂದನೆ ಸಿಕ್ಕಿಲ್ಲ ಎಂದರು. ನನ್ನ ಈ ಪುಸ್ತಕದಿಂದ ಬರುವ ಲಾಭಾಂಶವನ್ನು ಅಲೆಗಳಿಂದ ವಿದ್ಯುತ್ ಸಂಶೋಧನೆಗೆ ಬಳಸಿಕೊಳ್ಳುವುದಾಗಿ ಅವರು ತಿಳಿಸಿದರು.