×
Ad

ಕೇರಳ ಬಸ್‌ಗಳಿಂದ ಪರವಾನಿಗೆ ಉಲ್ಲಂಘನೆ: ಕೇಸು ದಾಖಲು

Update: 2018-07-26 22:41 IST

ಮಂಗಳೂರು, ಜು. 26: ಕಾಸರಗೋಡು- ಮಂಗಳೂರು ನಡುವೆ ಸಂಚರಿಸುವ ಎರಡು ಕೇರಳ ಸಾರಿಗೆ ಬಸ್‌ಗಳ ಚಾಲಕರ ವಿರುದ್ಧ ಪರವಾನಿಗೆ ಶರತ್ತು ಉಲ್ಲಂಘಿಸಿ ಬದಲೀ ಮಾರ್ಗದಲ್ಲಿ ಬಸ್ ಚಲಾಯಿಸಿದ ಬಗ್ಗೆ ಟ್ರಾಫಿಕ್ ಪೂರ್ವಠಾಣೆಯ ಪೊಲೀಸರು ಗುರುವಾರ ಕೇಸು ದಾಖಲಿಸಿದ್ದಾರೆ.

ಮಧ್ಯಾಹ್ನ 12:45ರ ವೇಳೆಗೆ ಬಸ್ ಚಾಲಕರಾದ ಶ್ರೀಜಿತ್ ಎಸ್.ಸಿ. ಮತ್ತು ವಿಲ್ಸನ್ ಎಂ.ವಿ. ಅವರು ತಮ್ಮ ಬಸ್‌ಗಳನ್ನು ಪಿವಿಎಸ್- ಬಳ್ಳಾಲ್‌ಬಾಗ್ ಮಾರ್ಗದ ಬದಲು ಬಂಟ್ಸ್ ಹಾಸ್ಟೆಲ್ ಬಳಿಯಿಂದ ಕರಂಗಲ್ಪಾಡಿ- ಪಿಯೋ ಮಾಲ್- ಬಿಜೈ ಮಾರ್ಗವಾಗಿ ಚಲಾಯಿಸಿದ್ದರು. ಈ ಹಿನ್ನೆಲೆಯಲ್ಲಿ ಟ್ರಾಫಿಕ್ ಪೂರ್ವ ಠಾಣೆಯ ಪೊಲೀಸರು ಈ ಎರಡೂ ಬಸ್‌ಗಳನ್ನು ಠಾಣೆಗೆ ಒಯ್ದು ಚಾಲಕರ ವಿರುದ್ಧ ಕೇಸು ದಾಖಲಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News