ಗಾಂಜಾ ಸೇವನೆ: ಓರ್ವನ ಬಂಧನ
Update: 2018-07-26 23:07 IST
ಉಡುಪಿ, ಜು.26: ಮಲ್ಪೆ ಮೂಡುತೋನ್ಸೆ ಗ್ರಾಮದ ಕಲ್ಯಾಣಪುರ ಮಿಲಾಗ್ರಿಸ್ ಚರ್ಚ್ ಬಳಿ ಗಾಂಜಾ ಸೇವಿಸಿ ಓಡಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದು, ಎನ್‌ಡಿಪಿಎಸ್ ಆಕ್ಟ್‌ನಡಿ ಪ್ರಕರಣ ದಾಖಲಿಸಿ ಕೊಂಡಿದ್ದಾರೆ.
ಸಂತೆಕಟ್ಟೆ 3ನೇ ಕ್ರಾಸ್ ನಯಂಪಳ್ಳಿ ನಿವಾಸಿ ಜ್ಯೂಲಿಯಸ್ ಲೂಯಿಸ್ (33) ಬಂಧಿತ ವ್ಯಕ್ತಿ. ಈತನನ್ನು ವಶಕ್ಕೆ ಪಡೆದ ಪೊಲೀಸರು ವೈದ್ಯಕೀಯ ತಪಾಸಣೆಗೆ ಒಳಪಡಿಸಿದ್ದು, ಗಾಂಜಾ ಸೇವನೆ ಮಾಡಿರುವುದು ಸಾಬೀತಾಗಿದೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.