ಮಲ್ಪೆ ನಾಡದೋಣಿ ಅವಘಡ: ನಾಪತ್ತೆಯಾಗಿದ್ದ ಯುವಕನ ಮೃತದೇಹ ಪತ್ತೆ
Update: 2018-07-26 23:08 IST
ಮಲ್ಪೆ, ಜು.26: ಸಾಂಪ್ರದಾಯಿಕ ಮೀನುಗಾರಿಕೆಯ ನಾಡದೋಣಿ ಬುಧವಾರ ಬೆಳಗ್ಗೆ ಮುಳುಗಿ ನೀರುಪಾಲಾಗಿದ್ದ ಉದ್ಯಾವರ ಪಿತ್ರೋಡಿಯ ಸುರೇಶ್ ಕೋಟ್ಯಾನ್ ಅವರ ಪುತ್ರ ನಿಶಾಂತ್ ತಿಂಗಳಾಯ (19) ಅವರ ಮೃತದೇಹ ಗುರುವಾರ ಬೆಳಗ್ಗೆ ಪತ್ತೆಯಾಗಿದೆ.
ಬುಧವಾರ ಬೆಳಗ್ಗೆ ಮೀನುಗಾರಿಕೆಗೆ ತೆರಳಿದ್ದ ವೇಳೆ ಮಲ್ಪೆ ಪಡುಕರೆ ಶನೀಶ್ವರ ಪೂಜಾ ಮಂದಿರ ಸಮೀಪ ದೋಣಿ ಅವಘಡ ಸಂಭವಿಸಿ ಇಬ್ಬರು ನೀರು ಪಾಲಾಗಿದ್ದರು. ಈ ವೇಳೆ ನಿತೇಶ್ ಅವರ ಮೃತದೇಹ ಪತ್ತೆಯಾಗಿದ್ದು, ನಿಶಾಂತ್ ನಾಪತ್ತೆಯಾಗಿದ್ದರು. ಗುರುವಾರ ಬೆಳಗ್ಗೆ ಮೃತದೇಹ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.