ಜಿಲ್ಲಾ ಗೃಹರಕ್ಷಕ ದಳ ಕಚೇರಿಯಲ್ಲಿ ಗೃಹರಕ್ಷಕರಿಗೆ ಸನ್ಮಾನ
ಮಂಗಳೂರು, ಜು.27: ನಗರದ ಮೇರಿಹಿಲ್‌ನ ಜಿಲ್ಲಾ ಗೃಹರಕ್ಷಕದಳ ಕಚೇರಿ ಆವರಣದಲ್ಲಿ ಸಂಚಾರ ನಿಯಂತ್ರಣ ಕರ್ತವ್ಯ ನಿರ್ವಹಿಸುವ ಗೃಹರಕ್ಷಕರಾದ ಎಂ.ನವೀನ್ ಕುಮಾರ್, ರಾಜೇಶ್ ಗಟ್ಟಿ, ಹಮೀದ್ ಪಾವಲ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಗೃಹರಕ್ಷಕ ದಳದ ಕಮಾಂಡೆಂಟ್ ಡಾ. ಮುರಲಿ ಮೋಹನ್ ಚೂಂತಾರು ವಹಿಸಿ ಮಾತನಾಡಿ, ಮಳೆ, ಬಿಸಿಲು ಎನ್ನದೇ ಸಂಚ್ಟಾ ನಿಯಂತ್ರಣ ಕರ್ತವ್ಯವನ್ನು ಗೃಹರಕ್ಷಕ ದಳ ಸಿಬ್ಬಂದಿ ಉತ್ತಮವಾಗಿ ನಿರ್ವಹಿಸುತ್ತಿದ್ದಾರೆ ಎಂದು ನುಡಿದರು.
ಕಾರ್ಯಕ್ರಮದಲ್ಲಿ ಮುಖ್ಯಅತಿಥಿಗಳಾಗಿ ಶಾಸಕ ಭರತ್ ಶೆಟ್ಟಿ ವೈ., ಮಾಜಿ ಸೈನಿಕ ಸಂಘದ ಅಧ್ಯಕ್ಷ ವಿಕ್ರಂದತ್ತ, ಲಯನ್ಸ್ ಅಧ್ಯಕ್ಷ ವಿಜಯ್‌ವಿಷ್ಣು ಮಯ್ಯ, ಲಯನ್ಸ್ ಕಾರ್ಯದರ್ಶಿ ಹೇಮಾ ರಾವ್, ಲಯನೆಸ್ ಅಧ್ಯಕ್ಷೆ ಜ್ಯೋತಿ ಶೆಟ್ಟಿ, ಲಯನ್ಸ್ ಸದಸ್ಯರಾದ ಗುರುಪ್ರೀತ್, ನ್ಯಾನ್ಸಿ ಮಸ್ಕರೇನಸ್ ಉಪಸ್ಥಿತರಿದ್ದರು.
ಜಿಲ್ಲಾ ಗೃಹರಕ್ಷಕ ದಳದ ಉಪಸಮಾದೇಷ್ಟ ರಮೇಶ್ ವಂದಿಸಿದರು. ಗೃಹರಕ್ಷಕ, ಗೃಹರಕ್ಷಕಿಯರು ಸೇರಿದಂತೆ ಸುಮಾರು 105ಕ್ಕೂ ಹೆಚ್ಚು ಮಂದಿ ಗೃಹರಕ್ಷಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.