×
Ad

ಸೆ. 19 ರಿಂದ ಪುತ್ತೂರು ತಾಲೂಕು ಸಾಹಿತ್ಯ ಸಮ್ಮೇಳನ : ಪದಾಧಿಕಾರಿಗಳ ಆಯ್ಕೆ

Update: 2018-07-27 18:46 IST

ಪುತ್ತೂರು, ಜು. 27: ಪುತ್ತೂರು ತಾಲೂಕು 18ನೆ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಪುತ್ತೂರಿನಲ್ಲಿ ನಡೆಸುವ ಸಲುವಾಗಿ ಪೂರ್ವಭಾವಿ ಸಭೆಯು ನಟರಾಜ ವೇದಿಕೆಯಲ್ಲಿ ನಡೆಯಿತು.

ಸ್ವಾಗತ ಸಮಿತಿಯ ಗೌರವಾಧ್ಯಕ್ಷರಾಗಿ ಸವಣೂರು ಸೀತಾರಾಮ ರೈ, ಅಧ್ಯಕ್ಷರಾಗಿ ಪ್ರೊ. ಎ.ವಿ. ನಾರಾಯಣ ಆಯ್ಕೆಯಾದರು. ಅದೇ ರೀತಿ ಸಮ್ಮೇಳನ ಸಮಿತಿಯ ಕಾರ್ಯದರ್ಶಿಯಾಗಿ ಹರಿಣಿ ಪುತ್ತೂರಾಯ, ಕೋಶಾಧಿಕಾರಿಯಾಗಿ ವಾಟೆಡ್ಕ ಕೃಷ್ಣಭಟ್ ಇವರು ಆಯ್ಕೆಯಾದರು.

ಸಮ್ಮೇಳನವನ್ನು ಯಶಸ್ವಿಯಾಗಿ ನಡೆಸುವ ದೃಷ್ಟಿಯಿಂದ ವಿವಿಧ ಸಮಿತಿಗಳನ್ನು ರಚಿಸಿ, ಸಂಚಾಲಕರನ್ನು ಆಯ್ಕೆಮಾಡಲಾಯಿತು. ಸಾಹಿತ್ಯ ಸಮ್ಮೇಳನವನ್ನು ಸೆಪ್ಟಂಬರ್ 19 ಮತ್ತು 20ರಂದು ನಡೆಸಲು ಸಭೆಯಲ್ಲಿ ನಿರ್ಧರಿಸಲಾಯಿತು ಎಂದು ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಐತಪ್ಪ ನಾಯ್ಕಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News