×
Ad

ಜು.29ರಂದು ರಂಗಯಾತ್ರೆ ನಾಟಕದ ಪ್ರಥಮ ಪ್ರದರ್ಶನ ಉದ್ಘಾಟನೆ

Update: 2018-07-27 20:14 IST

ಉಡುಪಿ, ಜು.27: ಮುದ್ರಾಡಿ ನಮ ತುಳುವೆರ್ ಕಲಾ ಸಂಘಟನೆಯ ವತಿಯಿಂದ 2018ರ ಪ್ರಥಮ ರಂಗಯಾತ್ರೆಯ ಪ್ರಯುಕ್ತ ಕುವೆಂಪು ರಾಮಾ ಯಣ ದರ್ಶನಂ ಆಧಾರಿತ ‘ದಶಾನನ ಸ್ವಪ್ನಸಿದ್ದಿ’ ನಾಟಕದ ಪ್ರಥಮ ಪ್ರದರ್ಶನ ವನ್ನು ಜು.29ರಿಂದ ಆ.2ರವರೆಗೆ ರಾಜ್ಯದ ನಾನಾ ಕಡೆಗಳಲ್ಲಿ ಏರ್ಪಡಿಸ ಲಾಗಿದೆ.

ಕೋಟ ಕಾರಂತ ಥೀಮ್ ಪಾರ್ಕ್‌ನಲ್ಲಿ ಜು.29ರಂದು ಸಂಜೆ 6:30ಕ್ಕೆ ನಡೆ ಯುವ ನಾಟಕದ ಉದ್ಘಾಟನೆಯನ್ನು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ ನೆರವೇರಿಸಲಿರುವರು. ಧರ್ಮ ಯೋಗಿ ಮೋಹನ್ ಸ್ವಾಮೀಜಿ ಆಶೀರ್ವಚನ ನೀಡಲಿರುವರು ಎಂದು ಸಂಘಟನಾ ಕಾರ್ಯದರ್ಶಿ ಜಗದೀಶ್ ಜಾಲಾ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.

ಮಂಜುನಾಥ ಎಲ್.ಬಡಿಗೇರ ನಿರ್ದೇಶನ, ರಂಗಪಠ್ಯ, ಪರಿಕಲ್ಪನೆ, ವಿನ್ಯಾಸದ ಈ ನಾಟಕದ ಪ್ರಥಮ ಪ್ರದರ್ಶನವು ಜು.30ರಂದು ಶಿವಮೊಗ್ಗದ ಕುವೆಂಪು ರಂಗ ಮಂದಿರ, ಜು.31ರಂದು ಸಾಣೆಹಳ್ಳಿ ಮಠ, ಆ.1ರಂದು ತುಮಕೂರು ಮಳೇಹಳ್ಳಿ ವಿ.ರಾಮಮೂರ್ತಿ ರಂಗಸ್ಥಳ, ಆ.2ರಂದು ನಾಗ ಮಂಗಲ ನಾಗರಂಗ ನಾಟಕೋತ್ಸವದಲ್ಲಿ ಜರಗಲಿದೆ.

ಸುದ್ದಿಗೋಷ್ಠಿಯಲ್ಲಿ ನಟ ನಾಗೇಂದ್ರ ಶಾ, ಮಾಧುರಿ, ನಮ ತುಳುವೆರ್ ಕಲಾ ಸಂಘಟನೆಯ ಅಧ್ಯಕ್ಷ ಸುಕುಮಾರ್ ಮೋಹನ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News