×
Ad

ಬೆಳಪು: ಯುಪಿಸಿಎಲ್ ಸಾಮಾಜಿಕ ಅರಣ್ಯ ಕಾರ್ಯಕ್ರಮಕ್ಕೆ ಚಾಲನೆ

Update: 2018-07-27 20:19 IST

ಕಾಪು, ಜು.27: ಅದಾನಿ ಯುಪಿಸಿಎಲ್ ವತಿಯಿಂದ ಬೆಳಪು ಗ್ರಾಮ ಪಂಚಾಯತ್ ವಠಾರದಲ್ಲಿ ಸಾಮಾಜಿಕ ಅರಣ್ಯ ಯೋಜನೆಗೆ ಇಂದು ಹಸಿರು ನಿಶಾನೆ ತೋರಿಸಲಾಯಿತು.

ಗ್ರಾಪಂ ಅಧ್ಯಕ್ಷ ದೇವಿ ಪ್ರಸಾದ್ ಶೆಟ್ಟಿ ಹಾಗೂ ಯುಪಿಸಿಎಲ್ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಕಿಶೋರ್ ಆಳ್ವ ಜಂಟಿಯಾಗಿ ಬೆಳಪು ಗ್ರಾಮದ ನಿವಾಸಿಗಳಿಗೆ ಲ ನೀಡುವ ಸಸಿಗಳನ್ನು ವಿತರಿಸಿ, ಪಂಚಾಯತ್ ವಠಾರದಲ್ಲಿ ಗಿಡಗಳನ್ನು ನೆಡುವುದರ ಮೂಲಕ ಸಾಮಾಜಿಕ ಅರಣ್ಯ ಕ್ರಿಯಾಯೋಜನೆಗೆ ಚಾಲನೆ ನೀಡಿದರು.

ಕಿಶೋರ್ ಆಳ್ವ ಮಾತನಾಡಿ, ಸಂಸ್ಥೆಯು ಸಿಎಸ್‌ಆರ್ ಯೋಜನೆಯಲ್ಲಿ ಈ ವಾರ್ಷಿಕ ಸಾಲಿನಲ್ಲಿ 35.63 ಲಕ್ಷ ರೂ. ಸಾಮಾಜಿಕ ಅರಣ್ಯ ಕಾರ್ಯಕ್ರಮಕ್ಕೆ ಮೀಸಲಿಟ್ಟಿದ್ದು, ಸ್ಥಾವರದ ಸುತ್ತಮುತ್ತಲಿನ ಗ್ರಾಮಗಳಲ್ಲಿ ಸುಮಾರು 50,000 ಕ್ಕಿಂತ ಹೆಚ್ಚು ಗಿಡಗಳನ್ನು ನೆಟ್ಟಿ ಪೋಷಿಸುವ ಗುರಿಯನ್ನು ಹೊಂದಿದೆ. ಉತ್ತಮ ತಳಿಯ ತೆಂಗು, ಅಡಿಕೆ, ಮಾವು, ಪೇರಳೆ, ನೇರಳೆ, ಚಿಕ್ಕೂ, ಹಲಸು ಇತ್ಯಾದಿ 10 ವಿವಿಧ ಲ ನೀಡುವ ಸಸಿಗಳ ಜೊತೆಗೆ ರೇಂಜಾ, ಟೀಕ್ ಹೆಬ್ಬಲಸು ಸಸಿಗಳನ್ನು ವಿತರಿಸುತ್ತಿದ್ದು, ಈಗಾಗಲೇ ಜಿಲ್ಲೆಯ 7000 ವಿದ್ಯಾರ್ಥಿಗಳಿಗೆ ನೀಡುವ ಸಸಿಯನ್ನು ವಿತರಿಸಲಾಗಿದೆ ಎಂದರು.

ಈ ಸಂದರ್ಭದಲ್ಲಿ ಬೆಳಪು ಗ್ರಾಪಂ ಉಪಾಧ್ಯಕ್ಷೆ ಶೋಭಾ ಭಟ್, ತಾಪಂ ಸದಸ್ಯ ಯು.ಸಿ.ಶೇಖಬ್ಬ, ಗ್ರಾಪಂ ಸದಸ್ಯರಾದ ದಿನೇಶ್ ಪೂಜಾರಿ, ಸುರೇಶ್ ದೇವಾಡಿಗ, ಅನಿತಾ ಆನಂದ, ನೂರ್ ಜಹಾನ್, ಫೈಸಂ ಬಾನು, ವಿಜಯಲಕ್ಷ್ಮಿ ದೇವಾಡಿಗ, ಕರುಣಾಕರ ಶೆಟ್ಟಿ, ಉಷಾ ವಾಸು, ಶರತ್ ಕುಮಾರ್, ಜಹೀರ್ ಅಹಮದ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಎಚ್.ಆರ್.ರಮೇಶ್, ಅದಾನಿ ಯುಪಿಸಿಎಲ್ ಕಂಪನಿಯ ಏಜಿಎಂ ಗಿರೀಶ್ ನಾವಡ, ಹಿರಿಯ ವ್ಯವಸ್ಥಾಪಕ ರವಿ ಆರ್.ಜೇರೆ, ಅದಾನಿ  ಫೌಂಡೇಶನ್‌ನ ಸಿಬ್ಬಂದಿಗಳಾದ ವಿನೀತ್ ಅಂಚನ್, ಅನುದೀಪ್ ಪೂಜಾರಿ, ಸುಕೇಶ್ ಸುವರ್ಣ ಮೊದಲಾದ ವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News