ಉಡುಪಿ: ಜು.28ರಂದು ಸ್ವಾಮಿ ಅಗ್ನಿವೇಶ್ ಹಲ್ಲೆ ಖಂಡಿಸಿ ಪ್ರತಿಭಟನೆ
Update: 2018-07-27 20:21 IST
ಉಡುಪಿ, ಜು.27: ಪ್ರಗತಿಪರ ಚಿಂತನೆಯ ಸ್ವಾಮಿ ಅಗ್ನಿವೇಶ್ ಮೇಲೆ ಹಲ್ಲೆ ಮಾಡಿರುವುದನ್ನು ಖಂಡಿಸಿ, ಸಂಶಯದ ನೆಲೆಯಲ್ಲಿ ಗುಂಪು ಹಲ್ಲೆಗಳು ನಡೆದು ಹಲವು ಜನ ಸಾವೀಗೀಡಾಗುತ್ತಿರುವುದನ್ನು ವಿರೋಧಿಸಿ, ಸರಕಾರಗಳು ಇಂತಹ ಘಟನೆಯ ಬಗ್ಗೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ಆಗ್ರಹಿಸಿ ಉಡುಪಿಯ ದಲಿತ ಹಿಂದುಳಿದ ಮತ್ತು ಅಲ್ಪಸಂಖ್ಯಾತ ಸಂಘಟನೆಗಳ ಒಕ್ಕೂಟವು ಕರ್ನಾಟಕ ಕೋಮು ಸೌಹಾರ್ದ ವೇದಿಕೆ, ಸಂವಿಧಾನದ ಉಳಿವಿಗಾಗಿ ಕರ್ನಾಟಕ ಚಳವಳಿ ಗಳು ಮತ್ತು ಸಹಭಾಗಿ ಸಂಘಟನೆಗಳ ಜೊತೆಗೂಡಿ ಪ್ರತಿಭಟನಾ ಸಭೆಯನ್ನು ಜು.28ರಂದು ಸಂಜೆ 5:30ಕ್ಕೆ ಉಡುಪಿ ಅಜ್ಜರಕಾಡಿನ ಹುತಾತ್ಮ ಚೌಕದ ಬಳಿ ಹಮ್ಮಿಕೊಂಡಿದೆ ಎಂದು ಪ್ರಕಟಣೆ ತಿಳಿಸಿದೆ.