ಉಡುಪಿ; ರಾಜ್ಯಮಟ್ಟದ ಆಯುರ್ವೇದ ವಿಚಾರ ಸಂಕಿರಣ
ಉಡುಪಿ, ಜು.27: ಕುತ್ಪಾಡಿ ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಆಯು ರ್ವೇದ ಕಾಲೇಜಿನ ಸ್ನಾತಕೋತ್ತರ ವಿಭಾಗ ಮತ್ತು ಕೊಲ್ಲಾಪುರ ಎಸ್.ಜಿ. ಪೈಟೋ ಫಾರ್ಮ ಇದರ ಸಹಭಾಗಿತ್ವದಲ್ಲಿ ರಸೌಷಧಿಗಳಿಂದ ಸುಲಭ ಚಿಕಿತ್ಸೆ ಎಂಬ ವಿಷಯದ ಕುರಿತ ರಾಜ್ಯಮಟ್ಟದ ನಿರಂತರ ವೈದ್ಯಕೀಯ ಶಿಕ್ಷಣ ಕಾರ್ಯ ಗಾರವನ್ನು ಕಾಲೇಜಿನ ಭಾವಪ್ರಕಾಶ ಸಭಾಂಗಣದಲ್ಲಿ ಇತ್ತೀಚೆಗೆ ಆಯೋಜಿಸ ಲಾಗಿತ್ತು.
ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ ಡಾ.ಜಿ.ಶ್ರೀನಿವಾಸ ಆಚಾರ್ಯ ಹಾಗೂ ಡಾ.ನಿರಂಜನ್ ರಾವ್ ಆಮವಾತ, ಸಂಧಿವಾತ ಹಾಗೂ ಇತರ ನರರೋಗಗಳಲ್ಲಿ ರಸೌಷಧಿ ಉಪಯೋಗಿಸುವ ಕ್ರಮದ ಬಗ್ಗೆ ಹಾಗೂ ಅವುಗಳ ಸಾಫಲ್ಯತೆಯ ಬಗ್ಗೆ ಮಾಹಿತಿ ನೀಡಿದರು.
ರಸೌಷಧಿ ತಯಾರಿಕೆಯ ಬಗ್ಗೆ ಮಹಾರಾಷ್ಟ್ರ ಶ್ವದ್ಯಾಲಯದ ಉಪನ್ಯಾಸಕ ಡಾ.ಶ್ರೀಹರಿ ಟಿ. ಪ್ರಾತ್ಯಕ್ಷಿಕೆ ನಡೆಸಿದರು. ಸುಮಾರು 300ಕ್ಕೂ ಹೆಚ್ಚು ಆಯು ರ್ವೇದ ವೈದ್ಯರು ಹಾಜರಿದ್ದರು. ವಿಚಾರ ಸಂಕಿರಣದ ಸಂಘಟನಾ ಕಾರ್ಯ ದರ್ಶಿ ಡಾ.ಅಶೋಕ್‌ಕುಮಾರ್ ಬಿ.ಎನ್. ಹಾಗೂ ಡಾ. ನಾಗರಾಜ್ ಎಸ್. ಉಪಸ್ಥಿತರಿದ್ದರು. ಡಾ.ಅರುಣ್‌ಕುಮಾರ್ ಹಾಗೂ ಡಾ. ನಿವೇದಿತಾ ಕಾರ್ಯ ಕ್ರಮ ನಿರೂಪಿಸಿದರು.