×
Ad

ಎಸ್ಸೆಸ್ಸೆಫ್ ತೊಕ್ಕೊಟ್ಟು ಸೆಕ್ಟರ್ ವಿಭಾಗದಿಂದ ಸಾಕಣೆಗಾಗಿ ಆಡು ವಿತರಣೆ

Update: 2018-07-27 20:42 IST

ತೊಕ್ಕೊಟ್ಟು, ಜು. 27: ಎಸ್ಸೆಸ್ಸೆಫ್ ತೊಕ್ಕೊಟ್ಟು ಸೆಕ್ಟರ್ ಸಾಂತ್ವಾನ ವಿಭಾಗ ದಿಂದ ಸಾಕಣೆಗಾಗಿ ಆಡು ವಿತರಣೆ ಕಾರ್ಯಕ್ರಮ ವಾದಿ ರೈಹಾನ್ ತೇೂಟ ಉಳ್ಳಾಲದಲ್ಲಿ ತೊಕ್ಕೂಟು ಸೆಕ್ಟರ್ ರಿಲೀಫ್ ವಿಭಾಗದ ಚೆಯರ್ಮ್ಯಾನ್ ಅಲ್ತಾಫ್ ಕುಂಪಲ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆಯಿತು.

ತೊಕ್ಕೇೂಟು ಸೆಕ್ಟರ್ ಮಹ್ಳರತುಲ್ ಬದ್ರಿಯ್ಯ ಖಲೀಫ ಇಲ್ಯಾಸ್ ಸಖಾಫಿ ದುಆ ನೇತೃತ್ವದಲ್ಲಿ ನಡೆದ ಕಾರ್ಯಕ್ರಮವನ್ನು ಎಸ್ಸೆಸ್ಸೆಫ್ ಉಳ್ಳಾಲ ಸೆಕ್ಟರ್ ಅಧ್ಯಕ್ಷ ಮುಸ್ತಫ ಮಾಸ್ಟರ್ ಉದ್ಘಾಟಿಸಿದರು. ಎಸ್ಸೆಸ್ಸೆಫ್ ಉಳ್ಳಾಲ ಸೆಕ್ಟರ್ ಕೇೂಶಾಧಿಕಾರಿ ಮುಝಮ್ಮಿಲ್ ಕೊಟೇಪುರ ಫಲಾನುಭವಿಗೆ ಆಡು ಹಸ್ತಾಂತರ ಮಾಡಿದರು.

ವೇದಿಕೆಯಲ್ಲಿ ಇಮ್ರಾನ್ ಕುತ್ತಾರ್, ಯುಬಿ ಹಂಝ ಸುಂದರಿ ಬಾಗ್, ಅಬ್ದುಲ್ ಖಾದರ್ ಜೀಲಾನಿ, ಬಾತಿಶ್  ಮಂಚಿಲ ಹಾಗು ಇತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News