×
Ad

ಮಠದ ವಿರುದ್ಧ ಮಾನಹಾನಿ ಸುದ್ದಿ ಪ್ರಸಾರಕ್ಕೆ ತಡೆ

Update: 2018-07-27 21:51 IST

ಉಡುಪಿ, ಜು.27: ಉಡುಪಿಯ ಶ್ರೀಕೃಷ್ಣ ಮಠ ಹಾಗೂ ಅಷ್ಟಮಠದ ವಿರುದ್ಧ ಮಾನಹಾನಿ ಮತ್ತು ಅವಹೇಳನಕಾರಿ ದೃಶ್ಯ ಹಾಗೂ ಸುದ್ದಿ ಪ್ರಸಾರಕ್ಕೆ ಉಡುಪಿ 3ನೇ ಹೆಚ್ಚುವರಿ ಸಿವಿಲ್ ನ್ಯಾಯಾಲಯ (ಕಿರಿಯ ವಿಭಾಗ) ತಡೆಯಾಜ್ಞೆ ನೀಡಿದೆ.

ಈ ಬಗ್ಗೆ ವಿಚಾರಣೆ ನಡೆಸಿದ ನ್ಯಾಯಾಧೀಶ ರಾಮ್‌ಪ್ರಶಾಂತ್, ಶಿರೂರು ಶ್ರೀಗಳ ವಿಷಯದಲ್ಲಿ ಕೃಷ್ಣ ಮಠ ಹಾಗೂ ಅಷ್ಟ ಮಠಾಧೀಶರ ವಿರುದ್ಧ 3 ಸ್ಥಳೀಯ ಸುದ್ದಿವಾಹಿನಿಗಳ ಸಹಿತ ರಾಜ್ಯದ 14 ದೃಶ್ಯಮಾಧ್ಯಮಗಳಲ್ಲಿ ಯಾವುದೇ ಮಾನಹಾನಿಕರ ದೃಶ್ಯ ಮತ್ತು ಸುದ್ದಿಗಳನ್ನು ಪ್ರಸಾರ ಮಾಡುವಂತಿಲ್ಲ ಎಂದು ಆದೇಶಿಸಿದ್ದಾರೆ.

ತುಶಿಮಾಮ ಅಧ್ಯಕ್ಷ ಕೆ. ಅರವಿಂದ ಆಚಾರ್ಯ, ಕಾರ್ಯದರ್ಶಿ ರವಿಪ್ರಕಾಶ್ ಭಟ್, ಕೋಶಾಧಿಕಾರಿ ಉದ್ಯಾವರ ವಾದಿರಾಜ ಆಚಾರ್ಯ ಕೋರ್ಟ್‌ನಲ್ಲಿ ಮೊಕದ್ದಮೆ ದಾಖಲಿಸಿದ್ದು, ನ್ಯಾಯವಾದಿ ಪ್ರದೀಪ್‌ಕುಮಾರ್ ವಾದಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News