ನೊಂದಾಯಿತ ವೈದ್ಯರ ಸಲಹಾ ಚೀಟಿ ಇಲ್ಲದೆ ಔಷಧ ಮಾರಾಟ: ಪರವಾನಿಗೆ ಅಮಾನತು
Update: 2018-07-27 22:16 IST
ಉಡುಪಿ, ಜು. 27: ಮೆ.ವಿವೇಕ್ ಮೆಡಿಕಲ್ಸ್ ಮತ್ತು ಜನರಲ್ ಸ್ಟೋರ್ಸ್ ಉಡುಪಿ ತಾಲೂಕು ಸಂಸ್ಥೆ ನೊಂದಾಯಿತ ವೈದ್ಯರ ಸಲಹಾ ಚೀಟಿ ಇಲ್ಲದೆ ಮತ್ತು ಅರ್ಹತಾ ವ್ಯಕ್ತಿಯ ಗೈರು ಹಾಜರಿಯಲ್ಲಿ ಅಲ್‌ಪ್ರೆಕ್ಸ್ 0.5 ಔಷಧ ಮಾರಾಟ ಮಾಡಿರುವುದಕ್ಕಾಗಿ ಕೆ.ವಿ.ನಾಗರಾಜ ಸಹಾಯಕ ಔಷಧ ನಿಯಂತ್ರಕರು ಮತ್ತು ಪರವಾನಿಗೆ ಪ್ರಾಧಿಕಾರಿ ಉಡುಪಿ ವೃತ್ತ ಅವರು ಸಂಸ್ಥೆಯ ಪರವಾನಿಗೆಗಳನ್ನು ಒಟ್ಟು 10 ದಿನಗಳಿಗೆ ಅಮಾನತ್ತುಗೊಳಿಸಿ ಆದೇಶ ಹೊರಡಿಸಿದ್ದಾರೆ.