ಕಾರ್ಕಳ: ಗರಡಿ ಸೊತ್ತು ಕಳವು
Update: 2018-07-27 22:32 IST
ಕಾರ್ಕಳ, ಜು.27: ದುರ್ಗಾ ಗ್ರಾಮದ ತೆಳ್ಳಾರು ಹಂಪೆದೊಟ್ಟು ಪಲೈ ಬಾಕ್ಯಾರು ಎಂಬಲ್ಲಿರುವ ಶ್ರೀಕೊಡಮಣಿತ್ತಾಯ ಹಾಗೂ ಶ್ರೀಬ್ರಹ್ಮಬೈದರ್ಕಳ ಗರಡಿ ಯಲ್ಲಿ ಜು.16ರಿಂದ ಜು.26ರ ಮಧ್ಯಾವದಿಯಲ್ಲಿ ಕಳವಾಗಿರುವ ಬಗ್ಗೆ ವರದಿಯಾಗಿದೆ.
ಗರಡಿ ಗರ್ಭಗುಡಿಯ ಬೀಗವನ್ನು ಮುರಿದು ಒಳನುಗ್ಗಿದ ಕಳ್ಳರು, ಕೊಡ ಮಣಿತ್ತಾಯ ಹಾಗೂ ಶ್ರೀಬ್ರಹ್ಮಬೈದರ್ಕಳ ದೈವದ ಪಂಚ ಲೋಹದ ಮೂರ್ತಿ, ಬೆಳ್ಳಿಯ ಕಡ್ಸಲೆ, ಬೆಯ ಪ್ರಬಾವಳಿ ಹಾಗೂ ಕವಚವನ್ನು ಕಳವು ಮಾಡಿದ್ದಾರೆ. ಇವುಗಳ ಒಟ್ಟು ಮೌಲ್ಯ 20,000ರೂ. ಎಂದು ಅಂದಾಜಿಸಲಾಗಿದೆ.
ಗರ್ಭಗುಡಿಯ ಹೊರಗೆ ಇದ್ದ ಕಾಣಿಕೆ ಡಬ್ಬಿಯ ಬೀಗವನ್ನು ಮುರಿದು ಅದರಲ್ಲಿದ್ದ 3000ರೂ. ನಗದನ್ನು ಕಳವು ಮಾಡಿದ್ದಾರೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.