ಬಿಹಾರದಲ್ಲಿ ಎನ್ ಡಿಎ ಸರಕಾರದ ಮೊದಲ ವಾರ್ಷಿಕೋತ್ಸವಕ್ಕೆ ನಿತೀಶ್ ಗೈರು

Update: 2018-07-28 11:30 GMT

ಪಾಟ್ನಾ, ಜು.28: ಬಿಹಾರದಲ್ಲಿ ಎನ್‍ಡಿಎ ಆಡಳಿತದ ಪ್ರಥಮ ವಾರ್ಷಿಕೋತ್ಸವಕ್ಕೆ ಮುಖ್ಯಮಂತ್ರಿ ನಿತೀಶ್ ಕುಮಾರ್ ಗೈರುಹಾಜರಾಗಿದ್ದಾರೆ. ಇದಕ್ಕೆ ಕಾರಣವೇನನ್ನೂ ನೀಡಲಾಗಿಲ್ಲವಾದರೂ ಅದೇ ದಿನ ಪ್ರಧಾನ ಮಂತ್ರಿ ಗ್ರಾಮೀಣ ಆವಾಸ್ ಯೋಜನೆಯನ್ವಯ ದಾಖಲೆ 11 ಲಕ್ಷ ಮನೆಗಳ ನಿರ್ಮಾಣ ಕಾರ್ಯದ ಆರಂಭಕ್ಕೆ ಅವರು ಉಪಮುಖ್ಯಮಂತ್ರಿ ಸುಶೀಲ್ ಮೋದಿ ಜತೆ ಹಾಜರಿದ್ದರು.

2016ರಲ್ಲಿ ಮಹಾಮೈತ್ರಿಕೂಟ ಸರಕಾರದ ಮೊದಲ ವರ್ಷಾಚರಣೆಗೂ ಹಾಜರಾಗದೆ ತಮ್ಮ ಸರಕಾರದ ರಿಪೋರ್ಟ್ ಕಾರ್ಡ್ ನೀಡಲು ವಿಫಲವಾಗಿದ್ದ ನಿತೀಶ್ ಈ ಬಾರಿಯೂ ಹಾಗೆಯೇ ಮಾಡಿದ್ದಾರೆ. ಆದರೆ ಆ ಸಂದರ್ಭ ತಮ್ಮ ಸರಕಾರದ ಸಾಧನೆಗಳ ಪುಸ್ತಿಕೆಯೊಂದನ್ನು ಸಿದ್ಧಪಡಿಸಿ ವಿತರಿಸಲು ಅವರು ಕ್ರಮ ಕೈಗೊಂಡಿದ್ದರು.

ಆದರೆ ಈ ಬಾರಿ ಮಾತ್ರ ಅವರು ಈ ರೀತಿಯ ಕ್ರಮ ಕೈಗೊಂಡಿಲ್ಲ. ಬಿಜೆಪಿ ಜತೆ ಮೈತ್ರಿಯಿಂದ ಅವರಿಗೆ ಅಸಮಾಧಾನವಾಗಿದೆಯೆಂದು ಇದು ತೋರಿಸುತ್ತದೆ ಎಂದೇ ನಂಬಲಾಗಿದೆ. ಪಾಟ್ನಾ ವಿವಿಗೆ ಕೇಂದ್ರೀಯ ವಿವಿ ಸ್ಥಾನಮಾನ ನೀಡದೇ ಇರುವ ಬಗ್ಗೆ ಹಾಗೂ ನೆರೆ ಪರಿಹಾರವಾಗಿ ರೂ 7,600 ಕೋಟಿ ನೀಡದೇ ಇರುವ ವಿಚಾರದಲ್ಲಿ ನಿತೀಶ್ ಗೆ ಕೇಂದ್ರದ ವಿರುದ್ಧ ಅಸಮಾಧಾನವಿದೆಯೆನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News