ಗೆಳೆಯನ ಹುಟ್ಟು ಹಬ್ಬಕ್ಕೆಂದು ತೆರಳಿದ್ದ ಯುವಕ ನಾಪತ್ತೆ
Update: 2018-07-28 18:14 IST
ಬಂಟ್ವಾಳ, ಜು. 28: ಗೆಳೆಯನ ಹುಟ್ಟು ಹಬ್ಬಕ್ಕೆಂದು ತೆರಳಿದ್ದ ಯುವಕನೋರ್ವ ನಾಪತ್ತೆಯಾದ ಘಟನೆ ಬಂಟ್ವಾಳದಲ್ಲಿ ನಡೆದಿದೆ.
ಬಂಟ್ವಾಳ ತಾಲೂಕಿನ ಕೆಳಗಿನ ಮಂಡಾಡಿ ನಿತ್ಯಾನಂದ ನಗರ ಗಣೇಶ್ ಕುಲಾಲ್ ಎಂಬವರ ಮಗ ಕಾರ್ತಿಕ್ (17) ನಾಪತ್ತೆಯಾದ ಯುವಕ. ಕಾರ್ತಿಕ್ ಜು. 20ರಂದು ಗೆಳೆಯನ ಹುಟ್ಟು ಹಬ್ಬಕ್ಕೆ ಹೋಗುತ್ತಿದ್ದೇನೆ ಎಂದು ತಾಯಿಯಲ್ಲಿ ಹೇಳಿ ಮನೆಯಿಂದ ಹೋದವನು ವಾಪಾಸು ಬರದೆ ನಾಪತ್ತೆಯಾಗಿದ್ದಾನೆ. ಈ ಬಗ್ಗೆ ಗೆಳೆಯನನ್ನು ವಿಚಾರಿಸಿದಾಗ ಆತನ ಮನೆಗೆ ಬಂದಿಲ್ಲ. ಅಲ್ಲದೆ, ಬೇರೆ ಸಂಬಂಧಿಕರ ಮನೆಗೂ ಹೋಗದೆ ನಾಪತ್ತೆಯಾಗಿರುವ ಬಗ್ಗೆ ಆತನ ಪೋಷಕರು ಬಂಟ್ವಾಳ ನಗರ ಠಾಣೆಯಲ್ಲಿ ದೂರು ನೀಡಿದ್ದಾರೆ.
ಈತನ ಬಗ್ಗೆ ಸುಳಿವು ಸಿಕ್ಕಲ್ಲಿ ನಗರ ಠಾಣೆಯನ್ನು ಸಂಪರ್ಕಿಸುವಂತೆ ಪೊಲೀಸರು ತಿಳಿಸಿದ್ದಾರೆ.