×
Ad

ಗೋರಕ್ಷಣೆಯ ಬಗ್ಗೆ ಮಾತನಾಡುವ ನೈತಿಕತೆ ಸಂಘಪರಿವಾರಕ್ಕಿಲ್ಲ: ಎಸ್‌ಡಿಪಿಐ

Update: 2018-07-28 18:16 IST

ಬಂಟ್ವಾಳ, ಜು. 28: ದೇಶದಲ್ಲಿ ಅಕ್ರಮ ಗೋಸಾಗಾಟದ ವಿಚಾರವನ್ನಿಟ್ಟುಕೊಂಡು ರಾಜಕೀಯಲಾಭ ಪಡೆಯುವ ಪಕ್ಷದ ಕಾರ್ಯಕರ್ತನೇ ಇಂದು ಅಕ್ರಮ ಗೋ ಸಾಗಾಟದಲ್ಲಿ ಭಾಗಿಯಾಗಿ ಪ್ರಕರಣ ದಾಖಲಾಗಿದ್ದು, ಸಂಘಪರಿವಾರದ ನೈಜ ಮುಖ ಕಳಚಿದೆ. ಬಜರಂಗದಳ ಕಾರ್ಯಕರ್ತ ಎಂಬ ಹೇಳಿಕೆಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳೇ ನೀಡಿದ ಮೇಲೆ ಗೋರಕ್ಷಣೆಯ ಬಗ್ಗೆ ಮಾತನಾಡುವ ನೈತಿಕತೆ ಸಂಘಟನೆಗೆ ಇಲ್ಲ ಎಂದು ಎಸ್‌ಡಿಪಿಐ ಬಂಟ್ವಾಳ ಕ್ಷೇತ್ರದ ಉಪಾಧ್ಯಕ್ಷ ಖಲಂದರ್ ಪರ್ತಿಪ್ಪಾಡಿ ಹೇಳಿದ್ದಾರೆ.

ವಿಟ್ಲಪಡ್ನೂರು ಗ್ರಾಮ ಪಂಚಾಯತ್‌ಗೆ ಕಳೆದ ಚುನಾವಣೆಯ ಸಮಯ ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಶಶಿಕುಮಾರ್ ನಿಂತಿದ್ದು, ಹಲವು ಕಾರ್ಯ ಕ್ರಮಗಳಲ್ಲಿಯೂ ಮುಂಚೂಣಿಯಲ್ಲಿರುತ್ತಿದ್ದ. ಸಂಘ ಪರಿವಾರದ ರಾಜ್ಯ ರಾಷ್ಟ್ರ ನಾಯಕರು ಗೋವಿನ ಹೆಸರಿನಲ್ಲಿ ವಿವಿಧ ಹೇಳಿಕೆಗಳನ್ನು ಕೊಟ್ಟಿದ್ದು, ಈಗ ಈತನಿಗೆ ಯಾವ ರೀತಿ ಕ್ರಮ ಕೈಗೊಳ್ಳುತ್ತಾರೆ ಎಂದ ಅವರು, ಜನ ಸಾಮಾನ್ಯರಲ್ಲಿ ಕೋಮು ದ್ವೇಷದ ವಿಷ ಬೀಜವನ್ನು ಬಿತ್ತುವುದು ಸರಿಯಲ್ಲ. ನಿಷ್ಠಾವಂತ ಪೊಲೀಸ್ ಅಧಿಕಾರಿಗಳಿಂದ ಇಂದು ಶಶಿಕುಮಾರ್ ಭಟ್ ನಂತಹ ನಿಜ ಬಣ್ಣ ಬಯಲಾಗಿದೆ. ಈತನ ಜೊತೆಗೆ ಇನ್ನೂ ಹಲವು ತಂಡಗಳಿದ್ದು, ಪತ್ತೆ ಹಚ್ಚಿ ಗೋ ಸಾಗಾಟದ ಗೊಂದಲವನ್ನು ನಿವಾರಿಸಬೇಕೆಂದು ಅವರು ಆಗ್ರಹಿಸಿದರು.

ಪುತ್ತೂರು ವಿಧಾನ ಸಭಾ ಕ್ಷೇತದ ಎಸ್‌ಡಿಪಿಐ ಸದಸ್ಯ ಎ.ಎಂ. ಶಾಕೀರ್ ಮಾತನಾಡಿ, ಲೋಕಸಭಾ ಚುನಾವಣೆ ಸಮೀಪಿಸುತ್ತಿರುವ ಸಮಯದಲ್ಲಿ ಗೋರಕ್ಷಣೆಯ ದಾಳಿ ಪ್ರಕರಣ ಹೆಚ್ಚಾಗುತ್ತಿವೆ. ಶಶಿಕುಮಾರ್ ಭಟ್ ಬಜರಂಗದಳದ ಕಾರ್ಯಕರ್ತ ಅಲ್ಲ ಎಂದು ಹೇಳುತ್ತಿದ್ದಾರೆ. ಸಂಘಟನೆಯ ಕಾರ್ಯಕರ್ತನನ್ನು ಹಿಡಿದಾಗ ತಮ್ಮ ಸಂಘಟನೆಗೆ ಸಂಬಂಧ ಇಲ್ಲದಂತೆ ವರ್ತಿಸುವುದನಿದು ಮೊದಲೇನಲ್ಲ. ಅಲ್ಪ ಸಂಖ್ಯಾತರನ್ನು ಗೋಸಾಟದ ವಿಷಯದಲ್ಲಿ ಬಳಸಿಕೊಳ್ಳುವ ಮೂಲಕ ಜನರನ್ನು ಎತ್ತಿಕಟ್ಟಲಾಗುತ್ತಿದೆ. ರಾಷ್ಟ್ರಾದ್ಯಂತ ಇಂತಹ ಚಟುವಟಿಕೆ ನಡೆಯುತ್ತಿವೆ ಎಂದು ಆರೋಪಿಸಿದರು.

ವಿಟ್ಲ ವಲಯ ಸಮಿತಿ ಅಧ್ಯಕ್ಷ ರಹೀಂ ವಿಟ್ಲ, ಉಪಾಧ್ಯಕ್ಷ ಅಬೂಬಕರ್ ಕೊಳಂಬೆ, ವಿಟ್ಲಪಡ್ನೂರು ವಲಯ ಸಮಿತಿ ಅಧ್ಯಕ್ಷ ಮುಹಮ್ಮದ್ ಕಡಂಬು, ಕಾರ್ಯದರ್ಶಿ ಶಹೀರ್ ಪರ್ತಿಪ್ಪಾಡಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News