1,000 ಅಕ್ರಮ ವಲಸಿಗ ಕುಟುಂಬಗಳ ಗಡಿಪಾರು ಅಮೆರಿಕ

Update: 2018-07-28 14:41 GMT

ವಾಶಿಂಗ್ಟನ್, ಜು. 28: ಅಮೆರಿಕದಲ್ಲಿ ಅಕ್ರಮ ವಲಸೆಗಾಗಿ ಬಂಧಿಸಲ್ಪಟ್ಟು ಮಕ್ಕಳಿಂದ ಬೇರ್ಪಡಿಸಲ್ಪಟ್ಟ ಸುಮಾರು 1,000 ಕುಟುಂಬಗಳು ಇದೀಗ ಒಂದುಗೂಡಿವೆಯಾದರೂ, ಅವರನ್ನು ಗಡಿಪಾರು ಮಾಡಲಾಗುತ್ತಿದೆ ಎಂದು ಸರಕಾರ ಹೇಳಿದೆ.

ವಲಸೆ ಅಧಿಕಾರಿಗಳ ಸುಪರ್ದಿಯಲ್ಲಿ 392 ಕುಟುಂಬಗಳು ಇವೆ ಹಾಗೂ ಉಳಿದ ಕುಟುಂಬಗಳನ್ನು ಬಿಡುಗಡೆಗೊಳಿಸಲಾಗಿದೆ ಎಂದು ಕಾನೂನು ಇಲಾಖೆಯ ವಕೀಲರು ಸಾನ್ ಡೀಗೊದ ನ್ಯಾಯಾಲಯವೊಂದರಲ್ಲಿ ನಡೆದ ವಿಚಾರಣೆಯಲ್ಲಿ ಹೇಳಿದ್ದಾರೆ.

650 ಅಪ್ರಾಪ್ತ ವಯಸ್ಕರನ್ನು ಅವರ ಹೆತ್ತವರೊಂದಿಗೆ ಸೇರಿಸಲು ಸಾಧ್ಯವಾಗುವುದಿಲ್ಲ ಹಾಗೂ ಈ ಪೈಕಿ 431 ಮಕ್ಕಳ ಹೆತ್ತವರು ಅಮೆರಿಕದಲ್ಲಿಲ್ಲ ಎಂದು ವಕೀಲರು ಹೇಳಿದರು.

ನ್ಯಾಯಾಧೀಶೆ ಡಾನಾ ಸಾಬ್ರಾ ಅವರ ಆದೇಶದಂತೆ, ಅಮೆರಿಕ ಸರಕಾರವು ಜುಲೈ 26ರೊಳಗೆ 2,551 ಅಪ್ರಾಪ್ತ ವಯಸ್ಕರನ್ನು (5ರಿಂದ 18ವರ್ಷದ ಒಳಗಿನವರು) ಅವರ ಹೆತ್ತವರೊಂದಿಗೆ ಸೇರಿಸಬೇಕಾಗಿತ್ತು.

ಕುಟುಂಬದೊಂದಿಗೆ ಸೇರಿಕೊಳ್ಳುವ ಅರ್ಹತೆಯುಳ್ಳ 1,800 ಕುಟುಂಬಗಳನ್ನು ಈಗಾಗಲೇ ಒಗ್ಗೂಡಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News