ದುಬೈ: ಪ್ರತಿ ದಿನ 15 ಲಕ್ಷ ಜನರಿಂದ ಸಾರ್ವಜನಿಕ ಸಾರಿಗೆ ಬಳಕೆ

Update: 2018-07-28 15:00 GMT

ದುಬೈ, ಜು. 28: ದುಬೈಯಲ್ಲಿ ಪ್ರತಿದಿನ ಸರಾಸರಿ 15 ಲಕ್ಷಕ್ಕೂ ಅಧಿಕ ಮಂದಿ ಸಾರ್ವಜನಿಕ ಸಾರಿಗೆಯನ್ನು ಬಳಸುತ್ತಿದ್ದಾರೆ ಎಂದು ರಸ್ತೆಗಳು ಮತ್ತು ಸಾರಿಗೆ ಪ್ರಾಧಿಕಾರದ (ಆರ್‌ಟಿಎ) ನೂತನ ಅಂಕಿಸಂಖ್ಯೆಗಳು ಹೇಳಿವೆ.

ಈ ವರ್ಷದ ಮೊದಲ ಆರು ತಿಂಗಳಲ್ಲಿ ಸಾರ್ವಜನಿಕ ಸಾರಿಗೆಯಲ್ಲಿ 27.79 ಕೋಟಿ ಮಂದಿ ಪ್ರಯಾಣಿಸಿದ್ದಾರೆ.

‘‘ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ, ಸಾರ್ವಜನಿಕ ಸಾರಿಗೆಯನ್ನು ಬಳಸುವವರ ಸಂಖ್ಯೆಯಲ್ಲಿ ನಿರಂತರ ವೃದ್ಧಿಯಾಗಿದೆ’’ ಎಂದು ಆರ್‌ಟಿಎಯ ಕಾರ್ಯಕಾರಿ ನಿರ್ದೇಶಕರ ಮಂಡಳಿಯ ಅಧ್ಯಕ್ಷ ಹಾಗೂ ಮಹಾನಿರ್ದೇಶಕ ಮತ್ತಾರ್ ಅಲ್-ತಾಯಿರ್ ಹೇಳಿದರು.

ಕಳೆದ ವರ್ಷದ ಇದೇ ಅವಧಿಯಲ್ಲಿ ದುಬೈ ಸಾರ್ವಜನಿಕ ಸಾರಿಗೆಯಲ್ಲಿ 27.52 ಮಂದಿ ಪ್ರಯಾಣಿಸಿದ್ದರು.

ಜನರ ಆದ್ಯತೆಯ ಸಾರ್ವಜನಿಕ ಸಾರಿಗೆಯ ಪೈಕಿ ದುಬೈ ಮೆಟ್ರೊ ಮೊದಲ ಸ್ಥಾನದಲ್ಲಿದೆ. 37.17 ಶೇಕಡ ಮಂದಿ ಈ ಮಾದರಿಯ ಸಾರಿಗೆಯನ್ನು ಬಳಸುತ್ತಿದ್ದಾರೆ. ಎರಡನೇ ಸ್ಥಾನದಲ್ಲಿರುವ ಟ್ಯಾಕ್ಸಿಗಳನ್ನು 31.61 ಶೇಕಡ ಮಂದಿ ಉಪಯೋಗಿಸುತ್ತಿದ್ದಾರೆ. ಹಾಗೂ ಬಸ್ಸುಗಳಲ್ಲಿ 27.48 ಶೇಕಡ ಮಂದಿ ಪ್ರಯಾಣಿಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News