×
Ad

ಜೆಸಿಬಿ ಢಿಕ್ಕಿ : ದ್ವಿಚಕ್ರ ಸವಾರ ಮೃತ್ಯು

Update: 2018-07-28 20:48 IST

ಮೂಡುಬಿದಿರೆ, ಜು. 28: ದ್ವಿಚಕ್ರ ವಾಹನಕ್ಕೆ ಜೆಸಿಬಿಯೊಂದು ಢಿಕ್ಕಿ ಹೊಡೆದ ಪರಿಣಾಮವಾಗಿ ಗಂಭೀರವಾಗಿ ಗಾಯಗೊಂಡ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಶುಕ್ರವಾರ ರಾತ್ರಿ ಮೂಡುಬಿದಿರೆ ರಿಂಗ್ ರೋಡ್‌ನಲ್ಲಿ ಸಂಭವಿಸಿದ್ದು, ಜೆಸಿಬಿ ಚಾಲಕ ಪರಾರಿಯಾಗಿದ್ದಾನೆ.

ಬಡಗ ಎಡಪದವು ಮಜ್ಜಿಗುರಿಯ ನಿವಾಸಿ ಶೇಖರ್ ಮೃತಪಟ್ಟ ದುರ್ದೈವಿ. ಶೇಖರ್ ಅವರು ರಿಂಗ್ ರೋಡ್ ಮೂಲಕ ಮೂಡುಬಿದಿರೆ ಕಡೆಗೆ ಬರುತ್ತಿದ್ದಾಗ, ಶೆಟ್ಟಿ ಬಾರ್ ಬಳಿ ಜೆಸಿಬಿಯಿಂದ ಕೆಲಸ ನಡೆಯುತಿತ್ತು. ಈ ಸಂದರ್ಭದಲ್ಲಿ ದ್ವಿಚಕ್ರ ವಾಹನವನ್ನು ಗಮನಿಸದ ಜೆಸಿಬಿ ಚಾಲಕ ವಾಹನವನ್ನು ಚಲಾಯಿಸುವಾಗ ಜೆಸಿಬಿಯ ಬಕೆಟ್ ಶೇಖರ್ ಅವರ ತಲೆ ಭಾಗಕ್ಕೆ ರಭಸವಾಗಿ ಗುದ್ದಿದ್ದು ಈ ಸಂದರ್ಭದಲ್ಲಿ ಸವಾರ ರಸ್ತೆ ಬದಿಗೆ ಬಿದ್ದು ಸಾವನ್ನಪ್ಪಿದ್ದಾರೆ. 

ಮೂಡುಬಿದಿರೆ ಪೊಲೀಸರು ಸ್ಥಳಕ್ಕೆ ಭೇಟಿ ಪ್ರಕರಣವನ್ನು ದಾಖಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News