×
Ad

‘ಚೈಲ್ಡ್‌ಲೈನ್’ನಿಂದ ‘ತೆರೆದ ಮನೆ’ ಮಾಹಿತಿ ಕಾರ್ಯಕ್ರಮ

Update: 2018-07-28 20:52 IST

ಮಂಗಳೂರು, ಜು.28: ಮಕ್ಕಳ ಹಕ್ಕುಗಳ ರಕ್ಷಣೆಗಾಗಿ, ದೂರವಾಣಿ ಮೂಲಕ ಸೇವೆಯನ್ನು ನೀಡುತ್ತಿರುವ ‘ಚೈಲ್ಡ್‌ಲೈನ್-1098’ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ‘ತೆರೆದ ಮನೆ’ ಎಂಬ ಮಾಹಿತಿ ಕಾರ್ಯಕ್ರಮವು ಸುರತ್ಕಲ್ ಸಮೀಪದ ಸೆಕ್ರೆಡ್ ಹಾರ್ಟ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇತ್ತೀಚೆಗೆ ಜರುಗಿತು.

ಮಕ್ಕಳು ಹಾಗೂ ಅತಿಥಿಗಳು ಚೈಲ್ಡ್‌ಲೈನ್‌ನ ಭಿತ್ತಿಪತ್ರವನ್ನು ಪ್ರದರ್ಶಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಪ್ರಾಸ್ತಾವಿಕ ಮಾತುಗಳನ್ನಾಡಿದ ಮಕ್ಕಳ ಸಹಾಯವಾಣಿಯ ಸಂಯೋಜನಾಧಿಕಾರಿ ದೀಕ್ಷಿತ್ ಅಚ್ರಪ್ಪಾಡಿ. ಸಮಸ್ಯೆಯಲ್ಲಿರುವ ಮಕ್ಕಳ ರಕ್ಷಣೆಗಾಗಿ ಸಾರ್ವಜನಿಕರು ಮಕ್ಕಳ ಸಹಾಯವಾಣಿ-1098ಗೆ ದೂರವಾಣಿ ಕರೆಯನ್ನು ಮಾಡಿ ದೂರು ನೀಡಬಹುದು. ಚೈಲ್ಡ್‌ಲೈನ್ ದಿನದ 24 ಗಂಟೆಯೂ ಕಾರ್ಯನಿರತವಾಗಿರುತ್ತದೆ ಎಂದರು.

ಗ್ರಾಮಲೆಕ್ಕಾಧಿಕಾರಿ ಸುಧಾ ಜಾತಿ ಹಾಗೂ ಆದಾಯ ಪ್ರಮಾಣ ಪತ್ರವನ್ನು ಪಡೆಯಲು ಬೇಕಾಗುವಂತಹ ದಾಖಲೆಗಳ ಬಗ್ಗೆ ಮಾಹಿತಿ ನೀಡಿದರು. ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಯಶೋದಾ ‘ಏಕ ಪೋಷಕತ್ವ ಹಾಗೂ ಸುರಕ್ಷಿತ ಹಾಗೂ ಅಸುರಕ್ಷಿತ ಸ್ಪರ್ಶ’ದ ಬಗ್ಗೆ ಮಾಹಿತಿ ನೀಡಿದರು.

ಶಾಲಾಡಳಿತಾಧಿಕಾರಿ ಫಾ.ಪೌಲ್ ಪಿಂಟೋ ಮಾತನಾಡಿ ಮಕ್ಕಳನ್ನು ಅತಿಯಾಗಿ ಮುದ್ದು ಮಾಡದೆ ಶಿಸ್ತಿನಿಂದ ಬೆಳೆಸಬೇಕು. ಮಕ್ಕಳು ಏನು ಮಾಡುತ್ತಾರೆ ಎಂಬುದರ ಬಗ್ಗೆ ನಿಗಾ ವಹಿಸಬೇಕು ಎಂದು ಕಿವಿಮಾತಿತ್ತರು.

ಶಿಕ್ಷಣ ಸಂಪನ್ಮೂಲ ಸದಸ್ಯೆ ನಂದಾ ಪಾಯಸ್, ಚೈಲ್ಡ್‌ಲೈನ್ ಸದಸ್ಯರಾದ ಅಸುಂತಾ, ಕೀರ್ತಿಶ್ ಕಲ್ಮಕಾರ್, ನಾಗರಾಜ್ ಪಣಕಜೆ ಮತ್ತಿತರರು ಪಾಲ್ಗೊಂಡಿದ್ದರು.

ಮುಖ್ಯ ಶಿಕ್ಷಕಿ ಪ್ರಸಿಲ್ಲಾ ಸ್ಡಾಗತಿಸಿದರು. ಶಿಕ್ಷಕಿ ರೋಜಿ ವಂದಿಸಿದರು. ಆಶಾಲತಾ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News