×
Ad

ರಾ.ಕ್ರೀಡಾಕೂಟ: ಪ್ರಜ್ಞಾಗೆ ಬೆಳ್ಳಿಪದಕ

Update: 2018-07-28 22:14 IST

ಉಡುಪಿ, ಜು.28: ಗುಜರಾತ್‌ನ ವಡೋದರಾದಲ್ಲಿ ಜು.21ರಿಂದ 23 ರವರೆಗೆ ನಡೆದ ಅಖಿಲ ಭಾರತ ಯುವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನ 400 ಮೀ. ಹರ್ಡಲ್ಸ್ ಸ್ಪರ್ಧೆಯಲ್ಲಿ ಉಡುಪಿ ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಜಿಲ್ಲಾ ಕ್ರೀಡಾ ವಸತಿ ನಿಲಯದ ಕ್ರೀಡಾಪಟು ಪ್ರಜ್ಞಾ ಕೆ. ಬೆಳ್ಳಿ ಪದಕ ಪಡೆದಿದ್ದಾರೆ.

ಇವರು 400ಮೀ. ಹರ್ಡಲ್ಸ್ ಸ್ಪರ್ಧೆಯನ್ನು 1ನಿ.05ಸೆ. ಸಮಯದೊಂದಿಗೆ ಎರಡನೇಯವರಾಗಿ ಕ್ರಮಿಸಿ ಬೆಳ್ಳಿ ಪದಕ ಪಡೆದಿದ್ದಾರೆ. ಇವರು ಕ್ರೀಡಾ ವಸತಿ ನಿಲಯದ ತರಬೇತುದಾರ ಅನಂತರಾಮ ಕೆ. ಇವರಿಂದ ತರಬೇತಿ ಪಡೆಯು ತ್ತಿದ್ದಾರೆ. ಇವರಿಗೆ ಜಿಲ್ಲಾಡಳಿತ ಹಾಗೂ ಇಲಾಖೆ ಅಭಿನಂದನೆ ಸಲ್ಲಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News