×
Ad

ಅಪಘಾತ: ಸ್ಕೂಟರ್ ಸವಾರ ಮಹಿಳೆಗೆ ಗಾಯ

Update: 2018-07-28 22:19 IST

ಮಂಗಳೂರು, ಜು.28: ಬೈಕ್‌ಗೆ ಸ್ಕೂಟರ್ ಢಿಕ್ಕಿ ಹೊಡೆದ ಪರಿಣಾಮ ಸ್ಕೂಟರ್ ಸವಾರ ಮಹಿಳೆ ಗಾಯಗೊಂಡ ಘಟನೆ ಅಸೈಗೋಳಿ ಮಾನಸ ಫರ್ನಿಚರ್ ಶಾಪ್ ಬಳಿ ನಡೆದಿದೆ.

ಗಾಯಾಳುವನ್ನು ಸ್ಥಳೀಯ ನಿವಾಸಿ ಪ್ರತಿಭಾ ಎಂದು ಗುರುತಿಸಲಾಗಿದೆ.

ಉಳ್ಳಾಲ ನಿವಾಸಿ ಲೋಕೇಶ್ ಶುಕ್ರವಾರ ಬೈಕ್‌ನಲ್ಲಿ ಪತ್ನಿಯನ್ನು ಕುಳ್ಳಿರಿಸಿಕೊಂಡು ಕೊಣಾಜೆ ಮಂಗಳೂರು ವಿಶ್ವವಿದ್ಯಾನಿಲಯದ ಕಡೆಗೆ ತೆರಳುತ್ತಿದ್ದರು. ಅಸೈಗೋಳಿ ಮಾನಸ ಫರ್ನಿಚರ್ ಶಾಪಿನ ಬಳಿ ತಲುಪುತ್ತಿದ್ದ ವೇಳೆ ಘಟನೆ ನಡೆದಿದೆ.

ಎದುರು ಮಾರ್ಗದಿಂದ ಸ್ಕೂಟರ್‌ನ್ನು ಚಲಾಯಿಸಿಕೊಂಡು ಬರುತ್ತಿದ್ದ ಗಾಯಾಳು ಪ್ರತಿಭಾ ನಿಯಂತ್ರಣ ತಪ್ಪಿ ಲೋಕೇಶ್ ಚಲಾಯಿಸುತ್ತಿದ್ದ ಬೈಕ್‌ಗೆ ಢಿಕ್ಕಿ ಹೊಡೆಸಿದ್ದಾರೆ. ಪರಿಣಾಮ ಸ್ಕೂಟರ್ ಸಮೇತ ರಸ್ತೆಗೆಸೆಯಲ್ಪಟ್ಟ ಪ್ರತಿಭಾ ಗಾಯಗೊಂಡಿದ್ದಾರೆ. ಕೂಡಲೇ ಗಾಯಾಳುವನ್ನು ಸಾರ್ವಜನಿಕರು ಸಮೀಪದ ದೇರಳಕಟ್ಟೆಯ ಕಣಚೂರು ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸ್ದಿರು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ನಗರ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.

ಈ ಕುರಿತು ಮಂಗಳೂರು ಸಂಚಾರ ದಕ್ಷಿಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News