×
Ad

ಆ.16: ಕಲ್ಲಡ್ಕ ಜುಮಾ ಮಸ್ಜಿದ್‌ಗೆ ಚುನಾವಣೆ

Update: 2018-07-28 22:53 IST

ಮಂಗಳೂರು, ಜು.28: ಬಂಟ್ವಾಳ ತಾಲೂಕಿನ ಗೋಳ್ತಮಜಲು ಗ್ರಾಮದ ಕಲ್ಲಡ್ಕ ಮುಹಿಯುದ್ದೀನ್ ಜುಮಾ ಮಸ್ಜಿದ್‌ಗೆ ಆ.16ರಂದು ಚುನಾವಣೆ ನಡೆಸಲು ರಾಜ್ಯ ವಕ್ಫ್ ಬೋರ್ಡ್ ಅಧಿಸೂಚನೆ ಹೊರಡಿಸಿದೆ.

ಜು.31ರಿಂದ ನಾಮಪತ್ರಿಕೆ ಸಲ್ಲಿಕೆ ಆರಂಭವಾಗಲಿದ್ದು, ಆ.7 ನಾಮಪತ್ರ ಸಲ್ಲಿಕೆಗೆ ಕೊನೆಯ ದಿನಾಂಕವಾಗಿದೆ. ಆ.8 ನಾಮಪತ್ರ ಪರಿಶೀಲನೆ, ಆ.9 ನಾಮಪತ್ರ ವಾಪಸ್ ಪಡೆಯಲು ಅವಕಾಶವಿದೆ. ಆ.16ರಂದು ಬೆಳಗ್ಗೆ 9ರಿಂದ ಅಪರಾಹ್ನ 3ರವರೆಗೆ ಚುನಾವಣೆ ಮತ್ತು ಸಂಜೆ 4ಕ್ಕೆ ಫಲಿತಾಂಶ ಪ್ರಕಟಿಸಲಾಗುತ್ತದೆ.

ಮೂರು ವರ್ಷಗಳ ಅವಧಿಗೆ 21 ಸದಸ್ಯರ ಆಡಳಿತ ಸಮಿತಿಗೆ ಈ ಚುನಾವಣೆ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News