ಕಾರ್ಮಿಕರ ಸೌಲಭ್ಯ ಕಸಿದುಕೊಳ್ಳಲು ಕಾನೂನುಗಳಿಗೆ ತಿದ್ದುಪಡಿ: ವೀರಾಸ್ವಾಮಿ
ಉಡುಪಿ, ಜು.29: ಕೇಂದ್ರ ಸರಕಾರ ಕಾರ್ಮಿಕ ಕಾನೂನುಗಳಿಗೆ ತಿದ್ದುಪಡಿ ತರಲು ಹೊರಟಿದೆ. ಮಾಲಕರ ಪರವಾದ ಕಾನೂನು ಮೂಲಕ ಕಾರ್ಮಿಕರ ಹಕ್ಕು ಹಾಗೂ ಸೌಲಭ್ಯಗಳನ್ನು ಕಸಿದುಕೊಳ್ಳುವ ಪ್ರಯತ್ನ ಮಾಡುತ್ತಿದೆ. ಇದರ ವಿರುದ್ಧ ಕಾರ್ಮಿಕ ಸಂಘಟನೆಗಳು ಒಗ್ಗಟ್ಟಾಗಿ ಹೋರಾಟ ಮಾಡಬೇಕು ಎಂದು ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಶನ್ ಅಧ್ಯಕ್ಷ ಎನ್.ವೀರಾಸ್ವಾಮಿ ಹೇಳಿದ್ದಾರೆ.
ಉಡುಪಿ ಜಿಲ್ಲಾ ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕರ ಸಂಘ(ಸಿಐಟಿಯು) ಇದರ 16ನೆ ವಾರ್ಷಿಕ ಮಹಾಸಭೆಯನ್ನು ರವಿವಾರ ಕಟಪಾಡಿ ಕಲ್ಲಾಪು ನಿತ್ಯಾ ನಂದ ಸಭಾಭವನದಲ್ಲಿ ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಕಾರ್ಮಿಕ ಕಲ್ಯಾಣ ಮಂಡಳಿಯಲ್ಲಿ ಕಟ್ಟಡಗಳ ಸೆಸ್‌ನಿಂದ ಸಂಗ್ರಹವಾದ 7000ಕೋಟಿ ರೂ. ಕಾರ್ಮಿಕರ ಸೌಲಭ್ಯಗಳಿಗೆ ವಿತರಣೆಯಾಗದೆ ಉಳಿದು ಕೊಂಡಿದೆ. ಇದರಲ್ಲಿ ಕೇವಲ 220ಕೋಟಿ ರೂ. ಮಾತ್ರ ವ್ಯಯಿಸಲಾಗಿದೆ. ಅಸಂಘಟಿತ ಕಾರ್ಮಿಕರಿಂದ ಶೇ.60ರಷ್ಟು ಸಂಪತ್ತು ಈ ದೇಶಕ್ಕೆ ಬರುತ್ತಿದೆ. ಆದರೆ ಅದು ಶೇ.1ರಷ್ಟಿರುವ ಶಿ್ರೀಮಂತರಿಗೆ ಸೇರುತ್ತಿದೆ ಎಂದರು.
ಸರಕಾರಗಳು ಜಾರಿಗೆ ತರುತ್ತಿರುವ ಬಹುರಾಷ್ಟ್ರೀಯ ಕಂಪೆನಿಗಳ ಪರವಾದ ಹೊಸ ಹೊಸ ಕಾನೂನುಗಳಿಂದ ಈ ದೇಶದಲ್ಲಿ ರೈತರ ಆತ್ಮಹತ್ಯೆಗಳು ಹೆಚ್ಚಾಗು ತ್ತಿವೆ ಎಂದ ಅವರು, ಮಾಲಕರು ಕಾರ್ಮಿಕರ ಸುರಕ್ಷತೆಗೆ ಆದ್ಯತೆ ನೀಡಬೇಕು. ಯಾವುದೇ ಅವಘಡ ಸಂಭವಿಸಿದಾಗ ಪರಿಾರ ನೀಡಬೇಕು ಎಂದು ಹೇಳಿದರು.
ಅಧ್ಯಕ್ಷತೆಯನ್ನು ಉಡುಪಿ ಜಿಲ್ಲಾ ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕರ ಸಂಘದ ಅಧ್ಯಕ್ಷ ಶೇಖರ್ ಬಂಗೇರ ವಹಿಸಿದ್ದರು. ಉಡುಪಿ ಜಿಲ್ಲಾ ಸಿಐಟಿಯು ಪ್ರಧಾನ ಕಾರ್ಯದರ್ಶಿ ಕೆ.ಶಂಕರ್, ಉಡುಪಿ ಜಿಲ್ಲಾ ಹೆಂಚು ಕಾರ್ಮಿಕರ ಸಂಘದ ಪ್ರಧಾನ ಕಾರ್ಯದರ್ಶಿ ಎಚ್.ನರಸಿಂಹ ಮುಖ್ಯ ಅತಿಥಿಗಳಾಗಿದ್ದರು.
ವೇದಿಕೆಯಲ್ಲಿ ಸಂಘದ ಗೌರವಾಧ್ಯಕ್ಷ ದಯಾನಂದ ಕೋಟ್ಯಾನ್, ಕಾರ್ಯ ದರ್ಶಿ ಬಾಲಕೃಷ್ಣ ಶೆಟ್ಟಿ, ಕೋಶಾಧಿಕಾರಿ ಗಣೇಶ್ ನಾಯ್ಕಿ, ಮುಖಂಡರಾದ ರಾಮ ಪೂಜಾರಿ, ವಿಠಲ ಪೂಜಾರಿ, ಶಶಿಕಲಾ, ಸರೋಜ, ಕವಿರಾಜ್ ಮೊದ ಲಾದವರು ಉಪಸ್ಥಿತರಿದ್ದರು. ಸುಭಾಷ್‌ಚಂದ್ರ ನಾಯ್ಕಿ ಸ್ವಾಗತಿಸಿದರು. ರಾಮ ಕರ್ಕಡ ವಂದಿಸಿದರು. ಇದಕ್ಕೂ ಮೊದಲು ಕಟಪಾಡಿ ಪೇಟೆಯಿಂದ ಸಭಾ ಭವನದವರೆಗೆ ಮೆರವಣಿಗೆ ನಡೆಸಲಾಯಿತು.