×
Ad

ಒಳ್ಳೆಯ ಹವ್ಯಾಸಗಳು ಜೀವನದಲ್ಲಿ ಪ್ರತಿಭೆಗಳ ವಿಕಸನಕ್ಕೆ ಪ್ರೇರಣೆ: ಮೌನೇಶ ವಿಶ್ವಕರ್ಮ

Update: 2018-07-29 19:43 IST

ಬಂಟ್ವಾಳ, ಜು. 29: ಒಳ್ಳೆಯ ಹವ್ಯಾಸಗಳು ವಿದ್ಯಾರ್ಥಿ ಜೀವನದಲ್ಲಿ ಪ್ರತಿಭೆಗಳ ವಿಕಸನಕ್ಕೆ ಪ್ರೇರಣೆ ನೀಡುತ್ತದೆ ಎಂದು ಪತ್ರಕರ್ತ ಮೌನೇಶ ವಿಶ್ವಕರ್ಮ ಅಭಿಪ್ರಾಯಪಟ್ಟಿದ್ದಾರೆ.

ಪೊಳಲಿಯ ಸರಕಾರಿ ಪ್ರೌಢಶಾಲೆಯಲ್ಲಿ ಬಂಟ್ವಾಳ ರೋಟರೀ ಕ್ಲಬ್‌ನ ಇಂಟರ್ಯಾಕ್ಟ್ ಕ್ಲಬ್ ನ ಆಶ್ರಯದಲ್ಲಿ ಇತ್ತೀಚೆಗೆ ನಡೆದ ಮಾದಕ ವ್ಯಸನಗಳ ಕುರಿತ ಜಾಗೃತಿ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.

ಹದಿಹರೆಯದ ವಯಸ್ಸಿನಲ್ಲಿ ಕೆಲವೊಂದು ಬಾರಿ ಕೆಟ್ಟದ್ದೂ ಕೂಡ ಒಳ್ಳೆಯದು ಎಂಬ ಭ್ರಮೆ ಉಂಟಾಗಿ, ತಪ್ಪು ದಾರಿ ಹಿಡಿಯುವ ಸಾಧ್ಯತೆ ಇದೆ. ಈ ಬಗ್ಗೆ ವಿದ್ಯಾರ್ಥಿಗಳು ಜಾಗೃತರಾಗಬೇಕು, ಕೆಟ್ಟ ಚಟಗಳಿಂದ ದೂರವಿರಬೇಕು. ತಮ್ಮ ಸಾಧನೆಗಳ ಮೂಲಕ ಹೆತ್ತವರು, ಶಿಕ್ಷಕರು, ತಾವು ಕಲಿತಶಾಲೆ, ಬೆಳೆದ ಊರಿಗೆ ಹೆಸರು ತರುವಂತೆ ಅವರು ಕಿವಿಮಾತು ಹೇಳಿದರು.

ಬಂಟ್ವಾಳ ರೋಟರಿ ಕ್ಲಬ್ ಅಧ್ಯಕ್ಷ ಮಂಜುನಾಥ ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು. ಇಂಟರ್ಯಾಕ್ಟ್ ಕ್ಲಬ್‌ನ ಸಂಯೋಜಕಿ ಶಿಕ್ಷಕಿ ರಂಜಿತಾ ರಾಜೀವ್ ಸ್ವಾಗತಿಸಿದರು. ಮುಖ್ಯಶಿಕ್ಷಕಿ ಉಮಾ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News